ಕರೊನಾ ಆಯ್ತು,, ಈಗ ಕೇರಳದ ನಿಫಾ ವೈರಸ್ ಕಾಟ ಶುರುವಾಗಿದೆ. ಈಗಾಗಲೇ ರಾಜ್ಯದ ಎಲ್ಲ ಕಡೆ ಹೈ ಅಲರ್ಟ್ ಘೋಷಣೆ ಸರ್ಕಾರ ಮಾಡಿದೆ.ನಿಫಾ ಬಗ್ಗೆ ಸರ್ಕಾರಕ್ಕೆ ತಜ್ಞರು ಕೊಟ್ಟಿರೋ ಸಲಹೆಗಳೇನು...?
*ಪ್ರಾಣಿಗಳಿಗೆ ಮೇ ಯಿಂದ ಸೆಪ್ಟೆಂಬರ್ ವರೆಗೆ ಸಂತಾನೋತ್ಪತ್ತಿ ಕಾಲ
ಆಗ ಪ್ರಾಣಿಗಳಿಂದ ಮನುಷ್ಯನಿಗೆ ತಗಲುವ ಸಾಧ್ಯತೆ ಹೆಚ್ಚು
ನಿಫಾ ವೈರಸ್ ಪತ್ತೆಯಾದ ಜಾಗಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು
ಪ್ರಾಣಿಗಳಿಗೆ ಹುಶಾರಿಲ್ಲದಿದ್ದಾಗ ಆದಷ್ಟು ದೂರವಿರಬೇಕು
ಈ ವೈರಸ್ ಗೂ ನಿಖರವಾದ ಲಸಿಕೆ, ಟ್ರಿಟ್ಮೆಂಟ್ ಇಲ್ಲ...
ವೈರಸ್ ಅಂಟಲು 4-14 ದಿನ ಸಮಯ ತೆಗೆದುಕೊಳ್ಳುತ್ತೆ.ಕರೊನಾ, ಹೆಚ್ 1, ಎನ್ 1 ರೀತಿಯ ಲಕ್ಷಣಗಳೇ ಇರತ್ತೆ.ವೈರಲ್ ಫೀವರ್ ತರ ಕಾಣಿಸಿಕೊಳ್ಳುತ್ತೆ ನಿಫಾ ವೈರಸ್ .ನಿಫಾ ವೈರಸ್ ಬಗ್ಗೆ ಆತಂಕಕಾರಿ ವಿಚಾರ ತಜ್ಞ ವೈದ್ಯ ಡಾ. ಮನೋಹರ್ ಕೆ.ಹೊರಹಾಕಿದಾರೆ. ಡಾ. ಮನೋಹರ್ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರಾಗಿದ್ದು,ಕರೊನಾಗಿಂತ ಡೇಂಜರ್ ಈ ಡೆಡ್ಲಿ ನಿಫಾ. ಈ ನಿಫಾ ಡೈರೆಕ್ಟ್ ಅಟ್ಯಾಕ್ ಮಾಡೋದು ಮೆದುಳಿಗೆ,ಕೋಮಾಗೆ ಹೋಗೋದು, ಫಿಡ್ಸ್ ಬರೋ ಸಾಧ್ಯತೆ ಹೆಚ್ಚು.ಕರೊನಾಗಿಂತ ಸಾವಿನ ಸಂಖ್ಯೆ ಈ ನಿಫಾ ವೈರಸ್ ಹೆಚ್ಚು ಮಾಡುತ್ತೆ .ನಿಫಾ ವೈರಸ್ ಬಗ್ಗೆ ಎಚ್ಚರವಹಿಸಬೇಕೆಂದು ತಜ್ಞರು ಹೇಳಿದ್ದಾರೆ..