ರಾಜ್ಯದ ಪ್ರಮುಖ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ 10 ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದೆ.
ದಾವಣಗೆರೆ ವಿಶ್ವ ವಿದ್ಯಾಲಯದಲ್ಲಿ ಹತ್ತು ಹೊಸ ತರಬೇತಿ ಕೋರ್ಸ್ ಆರಂಭಕ್ಕೆ ಯುಜಿಸಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯಾಭಿವೃದ್ದಿಗೆ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ತರಬೇತಿ ಕೋರ್ಸ್ ಗಳನ್ನು ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.
ಈ ಕೋರ್ಸ್ ಗಳಲ್ಲಿ ಶೇ.40 ರಷ್ಟು ಸಾಮಾನ್ಯ ಪಠ್ಯಕ್ರಮ, ಶೇ.60 ರಷ್ಟು ಕೌಶಲ್ಯಾಭಿವೃದ್ದಿಯ ಪಠ್ಯಕ್ರಮ ಅಳವಡಿಸಲಾಗಿರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ.ಹಲಸೆ ಮಾಹಿತಿ ನೀಡಿದ್ದಾರೆ.
ಡಿಪ್ಲೋಮಾ ಇನ್ ಡಿಜಿಟಲ್ ಆರ್ಟ್, ಪಿಜಿ ಡಿಪ್ಲೋಮಾ ಇನ್ ಡಿಜಿಟಲ್ ಮೀಡಿಯಾ, ಡಿಪ್ಲೋಮಾ ಇನ್ ಡೇಟಾ ಜರ್ನಲಿಸಂ, ಮಾರ್ಕೆಟಿಂಗ್ ರಿಟೇಲ್ ಮ್ಯಾನೇಜ್ಮೆಂಟ್, ಸೈಬರ್ ಸೆಕ್ಯೂರಿಟಿ ಕೋರ್ಸ್ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.