SSLC ಪರೀಕ್ಷೆ ಮಕ್ಕಳಿಗೆ ಮುಂದಿನ ಭವಿಷ್ಯಕ್ಕೆ ತುಂಬಾ ಮುಖ್ಯ. ಹೀಗಾಗಿ ನಾಳೆಯಿಂದ ನಡೆಯುವ SSLC ಪರೀಕ್ಷೆಗೆ ಮಕ್ಕಳು ರೆಡಿಯಾಗಿದ್ದಾರೆ. ಮತ್ತೊಂದು ಕಡೆ ಶಿಕ್ಷಣ ಇಲಾಖೆ ಸಕಲ ರೀತಿಯ ಸಿದ್ದತೆ ಮಾಡಿಕೊಂಡಿದೆ.ನಾಳೆಯಿಂದ SSLC ಪರೀಕ್ಷೆಗೆ ಶುರುವಾಗಲಿದ್ದು,ಏಪ್ರಿಲ್ 15ಕ್ಕೆ ಮುಗಿಯಲಿದೆ. ಹೀಗಾಗಿ ಶಿಕ್ಷಣ ಇಲಾಖೆ ಸಕಲ ರೀತಿಯಾಗಿ ಸಿದ್ಧತೆ ಮಾಡಿಕೊಂಡಿದೆ. ನಾಳೆ ಮೊದಲ ಪರೀಕ್ಷೆ ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ ವಿಷಯಗಳಿಗೆ ಪರೀಕ್ಷೆ ಇರಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:45ರವರೆಗೆ ಪರೀಕ್ಷೆ ಮುಗಿಯಲಿದೆ. ಒಟ್ಟು 8,42,811 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ಒಟ್ಟು 3,305 ಪರೀಕ್ಷಾ ಕೇಂದ್ರಗಳು ಸ್ಥಾಪನೆಯಾಗಿವೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು - 3 ಲಕ್ಷದ 60 ಸಾವಿರ 862, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು - 2,20,831, ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು – 2,61,18 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದೆ.ಒಟ್ಟು ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ರೆಗ್ಯುಲರ್ ವಿದ್ಯಾರ್ಥಿಗಳು- 7,94,611, ಪುನರಾವರ್ತಿತ ಅಭ್ಯರ್ಥಿಗಳು 20,750, ಖಾಸಗಿ ಅಭ್ಯರ್ಥಿಗಳು 18,272, ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 8,859, 2010 ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ ಅಭ್ಯರ್ಥಿಗಳು 301, 2010 ಕ್ಕಿಂತ ಹಿಂದಿನ ಸಾಲಿನ ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 15 ಪರೀಕ್ಷೆ ಬರೆಯಲಿದ್ದಾರೆ. ಎಕ್ಸಾಂ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಇರಲಿದ್ದು, 200 ಮೀಟರ್ ನಿಷೇದಾಜ್ಞೆ ಜಾರಿಯಾಗಿದೆ. ಪರೀಕ್ಷೆ ಪ್ರವೇಶ ಪತ್ರ ತೋರಿ KSRTC ಹಾಗೂ BMTC ಬಸ್ನಲ್ಲಿ ಉಚಿತ ಸೇವೆ ಇರಲಿದೆ.
SSLC ಪರೀಕ್ಷೆಯ ವೇಳಾಪಟ್ಟಿ
31-03-2023 - ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ.
04-04-2023 -ಗಣಿತ ಶಾಸ್ತ್ರ, ಸಮಾಜ ಶಾಸ್ತ್ರ.
06-04-2023- ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ.
10-04-2023- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ.
12-04-2023- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ..
15-04-2023 - ಸಮಾಜ ವಿಜ್ಞಾನ
ಇನ್ನೂ SSLC ರೀತಿಯಲ್ಲಿ ಪಿಯು ಪರೀಕ್ಷೆಗೂ ಸಮವಸ್ತ್ರ ನಿಯಮ ಜಾರಿಯಾಗಿದೆ. ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆ ಅವಕಾಶ ಇಲ್ಲ. ಹೀಗಾಗಿ ಪರೀಕ್ಷಾರ್ಥಿಗಳಿಗೆ ಸಮವಸ್ತ್ರ ಪಾಲನೆ ನಿಯಮ ಕಡ್ಡಾಯವಾಗಿದೆ.ಒಟ್ನಲ್ಲಿ ಯಾವುದೇ ತೊಂದರೆ ಆಗದಂತೆ ಶಿಕ್ಷಣ ಇಲಾಖೆ, ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆವಾಗಿ ಪರೀಕ್ಷೆ ಕೇಂದ್ರಗಳ ಸುತ್ತಲೂ ಟೈಟ್ ಸೆಕ್ಯೂರಿಟಿ ನಿಯೋಜನೆ ಮಾಡಿದ್ದಾರೆ.