Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚುನಾವಣೆಗೂ ಮೊದಲೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಮುಗಿಸಲು ಚಿಂತನೆ

ಚುನಾವಣೆಗೂ ಮೊದಲೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಮುಗಿಸಲು ಚಿಂತನೆ
ಬೆಂಗಳೂರು , ಶುಕ್ರವಾರ, 27 ಅಕ್ಟೋಬರ್ 2017 (08:23 IST)
ಬೆಂಗಳೂರು:ಮುಂಬರುವ ವಿ‍ಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.

ಏಪ್ರಿಲ್‌ 4ರೊಳಗೆ ಎರಡೂ ಪರೀಕ್ಷೆಗಳು ಪೂರ್ಣಗೊಂಡು, ಆ ತಿಂಗಳ ಅಂತ್ಯಕ್ಕೆ ಫ‌ಲಿತಾಂಶ ಪ್ರಕಟಗೊಳಿಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. 2018ರ ಮಾರ್ಚ್‌ 1ರಿಂದ 16ರ ತನಕ ಪಿಯುಸಿ ಪರೀಕ್ಷೆ ನಡೆಯಲಿದೆ. ಇದಾದ ಒಂದೇ ವಾರದಲ್ಲಿ ಅಂದರೆ, ಮಾರ್ಚ್‌ 23 ರಿಂದ ಏ.4ರ ತನಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಪರೀಕ್ಷೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಥಮ ಭಾಷೆ ಕನ್ನಡದಿಂದ ಆರಂಭವಾಗಿ ಸಮಾಜ ವಿಜ್ಞಾನ ಪರೀಕ್ಷೆಯೊಂದಿಗೆ ಕೊನೆಯಾಗಲಿದೆ. ಬೆಳಗ್ಗಿನ ಪರೀಕ್ಷೆ 9.30ರಿಂದ 12.15ರ ತನಕ ಹಾಗೂ ಮಧ್ಯಾಹ್ನ ಪರೀಕ್ಷೆ 2 ಗಂಟೆಯಿಂದ 5.15ರ ತನಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್ಸೆಸ್ಸೆಲ್ಸಿ ಬೋರ್ಡ್‌ ಮಾ.23ರಿಂದ ಏ.4ರ ತನಕ ನಡೆಸಲಿರುವ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಮಲ್ಲೇಶ್ವರದಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಅಂಚೆ ಮೂಲಕ ಅಥವಾ ನೇರವಾಗಿ ನ. 24ರೊಳಗೆ ಆಕ್ಷೇಪಣೆ ತಲುಪಿಸಬೇಕು. ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದರೆ ನ.24ರೊಳಗೆ ಜಂಟಿ ನಿರ್ದೇಶಕರು (ಪರೀಕ್ಷೆ) ಪದವಿ ಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡರಸ್ತೆ, ಮಲ್ಲೇಶ್ವರ ಇಲ್ಲಿಗೆ ತಲುಪಿಸಬೇಕು. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ.

ದ್ವಿತೀಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ
ದಿನಾಂಕ              ವಿಷಯ
ಮಾ. 1        ಅರ್ಥಶಾಸ್ತ್ರ, ಭೌತಶಾಸ್ತ್ರ
ಮಾ.2         ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಗಣಕ ವಿಜ್ಞಾನ
ಮಾ.3         ಹಿಂದಿ, ತೆಲಗು, ಮರಾಠಿ, ಫ್ರೆಂಚ್‌
ಮಾ.5         ವ್ಯವಹಾರ ಅಧ್ಯಯನ, ಜೀವಶಾಸ್ತ್ರ
ಮಾ.6         ರಾಜ್ಯಶಾಸ್ತ್ರ
ಮಾ.7         ಮಾಹಿತಿ ತಂತ್ರಜ್ಞಾನ, ರೀಟೇಲ್‌, ಅಟೋಮೋಟೀವ್‌, ಹೆಲ್ತ್‌ ಕೇರ್‌, ಬ್ಯೂಟಿ ಮತ್ತು ವೆಲ್‌ನೆಸ್‌(ಎನ್‌ಎಸ್‌ಕ್ಯೂಎಫ್)
ಮಾ.8        ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ರಸಾಯಶಾಸ್ತ್ರ
ಮಾ. 9       ತರ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಶಿಕ್ಷಣ
ಮಾ.10      ಇತಿಹಾಸ, ಗೃಹವಿಜ್ಞಾನ
ಮಾ.12      ಸಮಾಜಶಾಸ್ತ್ರ, ಗಣಿತ, ಬೇಸಿಕ್‌ ಮ್ಯಾಥ್ಸ್
ಮಾ.13      ಸಂಸ್ಕೃತ, ಉರ್ದು
ಮಾ.14      ಇಂಗ್ಲಿಷ್‌
ಮಾ.15      ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ಥಾನಿ ಸಂಗೀತ, ಭೂಗರ್ಭಶಾಸ್ತ್ರ
ಮಾ.16      ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್‌

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು ಪ್ರಕ್ರಿಯೆ ಮುಗಿದರೆ ಇಂದೇ ತೆಲಗಿ ಮರಣೋತ್ತರ ಪರೀಕ್ಷೆ