ಶಾಸಕ ಬಿ ಶ್ರೀರಾಮುಲು ಸರಕಾರಿ ಭೂ ಒತ್ತುವರಿ ಪ್ರಕರಣ ಹಿನ್ನೆಲೆ ಲೋಕಾಯುಕ್ತ ಎಡಿಜಿಪಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದ ವಿಚಾರ ಕುರಿತಂತೆ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಮಾತನಾಡಿದ ರಾಮುಲು, ನನಗೆ ಕಾನೂನಿನ ಮೇಲೆ ಗೌರವ ಇದೆ. ಅವರು ಎಲ್ಲಿ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ. ಅವರು ಏನೇ ಮಾಡಿದ್ರೂ ನಾನು ರೆಡಿ ಇದ್ದೇನೆ ಎಂದರು. ಇದೆ ವೇಳೆ, ಸಾಲ ಮನ್ನಾ ಬಗ್ಗೆ ರಾಮುಲುಗೆ ಮಾತನಾಡುವ ನೈತಿಕತೆ ಇಲ್ಲ ಎಂದಿರುವ ಸಿಎಂ ಹೆಚ್.ಡಿ.ಕೆ ಮಾತಿಗೆ ತಿರುಗೇಟು ನೀಡಿದರು. ಸಾಲ ಮನ್ನಾ ಬಗ್ಗೆ ಶ್ರೀರಾಮುಲು ಮಾತನಾಡದಿದ್ದರೆ ಬೇರೆ ಯಾರು ಮಾತಾಡ್ತಾರೆ. ಅವರು ಮಾಡಿದ್ದೇ ಆಟಾನಾ?ಎಂದು ಗರಂ ಆದರು.
ರೈತರಿಗೆ ಋಣಮುಕ್ತ ಮಾಡುವ ಬದಲು ಹೊಸ ಸಾಲ ಕೊಡ್ತಿಲ್ಲ. ಚಾಲ್ತಿ ಅಕೌಂಟ್ ಗಳು, ಚಾಲ್ತಿಯಲ್ಲಿರದ ಅಕೌಂಟ್ ಗಳು ಎಲ್ಲವೂ ರೈತರಿಗೆ ಗೊಂದಲ ಆಗ್ತಿದೆ ಎಂದರು. ಸಿದ್ದರಾಮಯ್ಯ ವಿದೇಶ ಪ್ರವಾಸ ಕುರಿತು ಕಿಡಿಕಾರಿದ ಶ್ರೀರಾಮುಲು, ಸಿದ್ರಾಮಯ್ಯ ಯಾವ ಉದ್ದೇಶ ಇಟ್ಟಗೊಂಡು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ರು ಆ ವಿಚಾರ ಮರೆತಿದ್ದಾರೆ. ಈಗ ವಿದೇಶ ಪ್ರವಾಸ ಹೊರಟಿದ್ದಾರೆ ಎಂದರು. ಚುನಾವಣೆಯಲ್ಲಿ ಗೆಲ್ಲಬೇಕೆಂಬ ಆಸೆ ಇಟ್ಗೊಂಡು ಸಿದ್ದರಾಮಯ್ಯ ಬಾದಾಮಿ ಬಂದ್ರೆ ವಿನಃ ಇಲ್ಲಿನ ಜನರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ದೂರಿದರು.