Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ: ಶ್ರೀನಿವಾಸ ಪ್ರಸಾದ್ ಘೋಷಣೆ

ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ: ಶ್ರೀನಿವಾಸ ಪ್ರಸಾದ್ ಘೋಷಣೆ
ಮೈಸೂರು , ಗುರುವಾರ, 13 ಏಪ್ರಿಲ್ 2017 (13:49 IST)
ನಂಜನಗೂಡು ಉಪಚುನಾವಣೆಯಲ್ಲಿ  ಸೋಲನುಭವಿಸಿರುವ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಇನ್ಮುಂದೆ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ  ಆದರೆ, ರಾಜಕೀಯ ನಿವೃತ್ತಿ ಪಡೆಯುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿಗೋಷ್ಠಿಯುದ್ದಕ್ಕೂ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ಇನ್ನಿತರೆ ಕಾಂಗ್ರೆಸ್ ನಾಯಕರ ವಿರುದ್ಧ ಶ್ರೀನಿವಾಸಪ್ರಸಾದ್ ವಾಗ್ದಾಳಿ ನಡೆಸಿದರು. ಕೊನೆಗಾಲದಲ್ಲಿ ಸಚಿವ ಸ್ಥಾನದಿಂದ ತೆಗೆದು ಸಿದ್ದರಾಮಯ್ಯ ನನ್ನ ಸಚಿವ ಸ್ಥಾನದಿಂದ ತೆಗೆದ ಘಾಸಿ ಉಂಟುಮಾಡಿದರು. ಅದಕ್ಕೇ ಪಕ್ಷ ಬಿಟ್ಟು ಬಂದೆ. ನನ್ನ ಮೇಲೆ ಒಂದು ಚಿಕ್ಕ ಕಳಂಕವಿದ್ದರೆ ತೋರಿಸಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಕೊನೆಯ 3 ದಿನ ಯಾವ ರೀತಿ ಚುನಾವಣೆ ನಡೆಸಿದರು ಎಂಬುದನ್ನ ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಲಿ. 1.25 ಲಕ್ಷ ಜನರಿಗೆ ಹಣ ಹಂಚಿದ್ದಾರೆ. ಸಿಎಂ ಆಪ್ತ ಕೆಂಪಯ್ಯ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.

ಅವತ್ತು ಚಾಮುಂಡೇಶ್ವರಿ ಚುನಾವಣೆಯಲ್ಲಿ ಕೇವಲ 250 ಮತಗಳಿಂದ ಗೆದ್ದಿದ್ದೆ, ಅವತ್ತು ನೀನೂ ಸೋತಿದ್ದರೆ ರಾಜಕೀಯ ಜೀವನ ಅಂತ್ಯವಾಗುತ್ತಿತ್ತು. ಚಾಮುಂಡೇಶ್ವರಿ ಚುನಾವಣೆ ವೇಳೆ ನನ್ನ ಮನೆ ಬಾಗಿಲಿಗೆ ಬಂದದ್ದು ಮರೆತುಬಿಟ್ಟಿರಾ..? ಖರ್ಗೆವರೆಗೆ ನಿಮ್ಮ ರೀತಿ ಮಗನಿಗೆ ಸಚಿವ ಸ್ಥಾನ ಕೊಡಿಸಲು ನಾನು ಪ್ರಯತ್ನ ನಡೆಸಿದ್ನಾ ಎಂದು ವಾಗ್ದಾಳಿ ನಡೆಸಿದ್ದಾರೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಅಭಿನಂದನೆ