Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎರಡು ಗಂಟೆ ಮಾತ್ರ ವಿಶೇಷ ಅಧಿವೇಶನ

ಎರಡು ಗಂಟೆ ಮಾತ್ರ ವಿಶೇಷ ಅಧಿವೇಶನ
ಬೆಂಗಳೂರು , ಶುಕ್ರವಾರ, 23 ಸೆಪ್ಟಂಬರ್ 2016 (11:39 IST)
ವಿಧಾನ ಸೌಧದಲ್ಲಿ ಸದನ ಸಲಹಾ ಸಮಿತಿ ಸಭೆ ಮುಕ್ತಾಯಗೊಂಡಿದ್ದು ಉಭಯ ಸದನಗಳಲ್ಲಿ ಕೈಗೊಳ್ಳಬೇಕಾದ ನಿರ್ಣಯದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿ ಹಲವಾರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇನ್ನು ಸ್ವಲ್ಪ ಹೊತ್ತಿನಲ್ಲಿ ಆರಂಭವಾಗುವ ಈ ವಿಶೇಷ ಅಧಿವೇಶನ ಐತಿಹಾಸಿಕ ನಿರ್ಧಾರಕ್ಕೆ ಸಾಕ್ಷಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಉಭಯ ಸದನಗಳಲ್ಲಿ ಸಂಪುಟ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಸದನ ಸಲಹಾ ಸಮಿತಿಯಲ್ಲಿ ಚರ್ಚಿಸಲಾಯಿತು. ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ  ಅಧಿವೇಶನದಲ್ಲಿ ಒಂದೇ ಸಾಲಿನ ನಿರ್ಣಯ ಮಂಡಿಸಲು  ನಿರ್ಧರಿಸಲಾಯಿತು. ಜತೆಗೆ ಅನಗತ್ಯ ಚರ್ಚೆ ಬೇಡ. ಹೆಚ್ಚಿನ ಸಮಯ ತೆಗೆದುಕೊಳ್ಳದೆ ಎರಡು ಮನೆಗಳ ಕಲಾಪವನ್ನು ಎರಡು ಗಂಟೆಯೊಳಗೆ ಮುಗಿಸುವುದು ಮತ್ತು ಯಾವುದೇ ಕಾರಣಕ್ಕೂ ನ್ಯಾಯಾಂಗ ನಿಂದನೆ ಬೇಡ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
 
ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡಂತೆ ಪ್ರತಿಯೊಬ್ಬ ನಾಯಕರಿಗೆ ಕೇವಲ 5 ನಿಮಿಷ ಮಾತನಾಡಲು ಅವಕಾಶ ನೀಡಲಾಗುತ್ತಿದೆ. 
 
ಕಲಾಪದಲ್ಲಿ ಸದನದ ನಾಯಕರಿಗೆ ಮಾತ್ರ ಮಾತನಾಡುವ ಅವಕಾಶವಿರುತ್ತದೆ. ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ವೈ ಎಸ್.ವಿ ದತ್ತಾ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆರ್ ಅಶೋಕ್, ಬಿ. ಆರ್. ಪಾಟೀಲ್, ಅಶೋಕ್ ಕೇಣಿ, ಕೆ. ಎಸ್ ಪುಟ್ಟಣ್ಣಯ್ಯ, ಪಿ, ರಾಜೀವ್ ಅವರಿಗೆ ಚರ್ಚೆಗೆ ಅವಕಾಶ ನೀಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ವಿರುದ್ಧ ಯುದ್ಧ ಸಾರಬೇಕೆ? ಈ ವಿಡಿಯೋ ನೋಡಿ ನಿರ್ಧರಿಸಿ