ಮೈತ್ರಿ ಸರಕಾರ ವಿಶ್ವಾಸಮತದಲ್ಲಿ ಸೋಲು ಕಂಡ ಬಳಿಕ ನಡೆಯುತ್ತಿರೋ ರಾಜಕೀಯ ವಿದ್ಯಮಾನವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ರಾಷ್ಟ್ರಪತಿ ಆಡಳಿತ ಜಾರಿ ಅನಿವಾರ್ಯ ಅಂತ ಸ್ಪೀಕರ್ ಹೇಳಿದ್ದಾರೆ.
ಜುಲೈ ಅಂತ್ಯದೊಳಗಾಗಿ ಹಣಕಾಸು ವಿನಿಯೋಗ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರ ಆಗಲೇಬೇಕಿದೆ. ಅದಾಗದಿದ್ದಲ್ಲಿ ಸಂವಿಧಾನ ಬಿಕ್ಕಟ್ಟು ಎದುರಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಧನ ವಿನಿಯೋಗ ಮಸೂದೆ ಅಂಗೀಕಾರ ತಡವಾದರೆ ಸರಕಾರಿ ನೌಕರರಿಗೆ ಸಂಬಳ, ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಕಷ್ಟವಾಗುತ್ತದೆ ಎಂದ್ರು.
ಇಂತಹ ಪರಿಸ್ಥಿತಿ ರಾಜ್ಯದಲ್ಲಿ ಈ ಹಿಂದೆ ನಿರ್ಮಾಣ ಆಗಿರಲಿಲ್ಲ. ಯಾರೇ ಸರಕಾರ ಮಾಡಿದರೂ ಜುಲೈ ಅಂತ್ಯದೊಳಗೆ ಧನ ವಿನಿಯೋಗ ಮಸೂದೆ ಅಂಗೀಕಾರ ಮಾಡಿಕೊಳ್ಳಬೇಕು ಎಂದ್ರು.