ಟಿಫಿನ್ ತಿಂದು ಟೀ ಕುಡಿಯೋಕೆ ಅಂತ ಹೋಗಿದ್ದ 50 ಜನರಿಗೆ ದಂಡ ವಿಧಿಸಲಾಗಿದೆ.
ತಲಾ 100 ರೂಪಾಯಿ ದಂಡ ವಿಧಿಸಲಾಗಿದ್ದು, ಹೋಟೆಲ್ ಗಳಿಗೆ ಬಂದವರು ಮಾಸ್ಕ್ ಧರಿಸಿರಲಿಲ್ಲ.
ಮಂಗಳೂರಿನ ಬೆಳ್ತಂಗಡಿಯಲ್ಲಿ ಲಾಕ್ ಡೌನ್ ನಿಯಮ ಪಾಲಿಸದ 7 ಹೋಟೆಲ್ ಗಳಿಗೆ ತಲಾ ಐದು ಸಾವಿರ ಹಾಗೂ ಮಾಸ್ಕ್ ಧರಿಸದೇ ಬಂದ 50 ಗ್ರಾಹಕರಿಗೆ ತಲಾ 100 ರೂಪಾಯಿ ದಂಡ ವಿಧಿಸಲಾಗಿದೆ.
ಲಾಕ್ ಡೌನ್ ನಿಯಮ ಪಾಲಿಸುವಂತೆ ಹಾಗೂ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಬಗ್ಗೆ ಅಧಿಕಾರಿಗಳು ತಿಳಿಹೇಳಿದರು.