ನೀರಾವರಿ ಇಲಾಖೆಯಲ್ಲಿ ಹಣ ಇಲ್ಲವೆಂದು ಹೇಳುತ್ತಾರೆ. ಮತ್ತೊಂದೆಡೆ ಕೆಲವರಿಗೆ 200 ರಿಂದ 300 ಕೋಟಿ ರೂಪಾಯಿ ಕೊಡುತ್ತಾರೆ. ಎಲ್ಲಾ ಬೆಳವಣಿಗೆಗಳನ್ನು ನಾನು ಕೂಡ ನೋಡುತ್ತಿದ್ದೇನೆ. ಕೆಲ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಸದ್ಯದಲ್ಲೇ ಬರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಲೇವಡಿ ಮಾಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಹೆಚ್.ಡಿ ರೇವಣ್ಣ, ನಿನ್ನೆ ನಾನು ಸಿಎಂ ಬಳಿ ನನ್ನ ಸ್ವಂತ ಕೆಲಸಕ್ಕಾಗಿ ಏನೂ ಕೇಳಿಲ್ಲ. ಹಾಸನ ಜಿಲ್ಲೆಯ ಹತ್ತು ಕಾಲೇಜಿಗೆ ಪಿಜಿ ವಿಭಾಗ ಕೊಡಿ ಎಂದು ಹಿಂದೆಯೇ ತೀರ್ಮಾನ ಆಗಿತ್ತು. ಇದೇ ಆದಾರದ ಮೇಲೆ ಹೊಳೆನರಸೀಪುರದ ಕ್ಷೇತ್ರದ 2 ಕಾಲೇಜುಗಳಿಗೆ ಪಿಜಿ ಸೆಂಟರ್ ನೀಡಲು ಮನವಿ ಮಾಡಿದ್ದೇನೆ ಅಷ್ಟೇ. ಈ ಬಗ್ಗೆ ವಿವಿ, ಇಲಾಖೆಯ ಕಾರ್ಯದರ್ಶಿಯೂ ಒಪ್ಪಿಗೆ ನೀಡಿದ್ದಾರೆ.
ಹೀಗಾಗಿ ನನ್ನ ಕ್ಷೇತ್ರದ 2 ಕಾಲೇಜಿಗೆ ಪಿಸಿ ಸೆಂಟರ್ ಕೇಳಿದ್ದೇನೆ. ರಾಜ್ಯ ಸರ್ಕಾರದ ಬಳಿ ನಾನು ಯಾವುದೇ ಅನುದಾನ ಕೇಳುತ್ತಿಲ್ಲ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ನಾನೇ ಸಂಬಳ ಕೊಡುತ್ತೇನೆ ಹೆಚ್.ಡಿ ರೇವಣ್ಣ ಹೇಳಿದರು.