Webdunia - Bharat's app for daily news and videos

Install App

ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಕಾಂಗ್ರೆಸ್ ನವರು ಇನ್ನಾದರೂ ಬುದ್ಧಿ ಕಲಿಯಲಿ-ಆರ್ ಅಶೋಕ್

Webdunia
ಶುಕ್ರವಾರ, 25 ಆಗಸ್ಟ್ 2023 (13:21 IST)
ಚಂದ್ರಯಾನ3 ಗೆ ಸರಿಸಾಟಿಯಾದ ಕೆಲಸವನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ.ಈ ಸಾಧನೆಯಿಂದ ನಮಗೆಲ್ಲ ಬಹಳ ಹೆಮ್ಮೆ ಇದೆ.ಮೋದಿಯವರು ನಾಡಿದ್ದು ಬೆಳಗ್ಗೆ ಬರ್ತಿದಾರೆ.ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ.ಪ್ರಧಾನಿಯವರ ಸ್ವಾಗತಕ್ಕೆ ಐದಾರು ಸಾವಿರ ಜನ ಸೇರ್ತೀವಿ.ಅಲ್ಲಿ ಮೋದಿಯವರು ಎಲ್ಲರನ್ನು ಉದ್ದೇಶಿಸಿ ಮಾತಾಡಬಹುದು.ಇಸ್ರೋ ಸಂಸ್ಥೆ ಇರುವ ಪ್ರದೇಶದಲ್ಲಿ ಮೋದಿಯವರು ಬಂದಾಗ ರೋಡ್ ಶೋ ಮಾಡ್ತೇವೆ.ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ.ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತ ಕೋರ್ತೇವೆ.ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ.ಅಲ್ಲಿ ಒಂದು ಕಿ.ಮೀವರೆಗೆ ರೋಡ್ ಶೋ‌ ಮಾಡ್ತೇವೆ.ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದೀವಿ.ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸ್ತೇವೆ.ಮೋದಿಯವರ ಭೇಟಿ ದಿನದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸ್ತೇವೆ ಎಂದು ಆರ್ ಅಶೋಕ್ ಹೇಳಿದ್ರು.
 
ಇನ್ನೂ ಸೋಮಶೇಖರ್ ಅವರು ಕಾಂಗ್ರೆಸ್ ಗೆ ಹೋಗಲ್ಲ.ಮಾಧ್ಯಮಗಳಲ್ಲಿ ಅವರು ಹೋಗ್ತಾರೆ ಅನ್ನೋ ವಾತಾವರಣ ಇದೆ . ಆದ್ರೆ ಅವರು ನಮ್ಮ ಪಕ್ಷದಲ್ಲೇ ಇರ್ತಾರೆ.ಎಲ್ಲ ಊಹಾಪೋಹಾ.ಈಗಲೂ ಸೋಮಶೇಖರ್ ಜತೆ ಮಾತಾಡಿದೀನಿ.ಬಂದು ಭೇಟಿ ಮಾಡುವಂತೆ ಹೇಳಿದೀನಿ, ಭೇಟಿ ಮಾಡ್ತಾರೆ.ನಾನೇ ಅವರನ್ನು ಪಕ್ಷಕ್ಕೆ ಕರೆತಂದಿರೋದು.ನಾನು ಐದು ಜನರನ್ನು ಕರೆದುಕೊಂಡು ಬಂದೆ, ಅದರಲ್ಲಿ ಸೋಮಶೇಖರ್ ಕೂಡಾ ಒಬ್ರು.ಸರ್ಕಾರ ರಚನೆ ಸಂದರ್ಭದಲ್ಲಿ ಯಡಿಯೂರಪ್ಪ ಹತ್ತು ಜನರನ್ನು ಕರೆತಂದ್ರು, ನಾನು ಐದು ಜನರನ್ನು ಕರೆದು ತಂದೆ.ಎಲ್ಲರಿಗಿಂತ ಚೆನ್ನಾಗಿ ಸೋಮಶೇಖರ್ ಬಗ್ಗೆ ನನಗೆ ಗೊತ್ತು.ಅವರ ಕ್ಷೇತ್ರದ ಭಾಗದಲ್ಲಿ ನಾನು ಮೂರು ಬಾರಿ ಶಾಸಕ‌ ಆಗಿದ್ದವನು.ಅವರ ಜತೆ ಮಾತಾಡಿದೀನಿ, ಏನಾಗುತ್ತೆ ಅಂತ ಕಾದು‌ನೋಡೋಣ.ನಿತ್ಯ ಅವರು ನನ್ನ ಜತೆ ಸಂಪರ್ಕದಲ್ಲಿ ಇದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments