ಬೆಂಗಳೂರಲ್ಲಿ ಮಳೆ ಹಿನ್ನೆಲೆ ರಸ್ತೆಯಲ್ಲಿ ನಿಂತ ನೀರನ್ನ ಟ್ರಾಫಿಕ್ ಪೊಲೀಸರೇ ಕ್ಲಿಯರ್ ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಕುಮಾರಸ್ವಾಮಿ ಲೇಔಟ್ನಲ್ಲಿ ರಸ್ತೆ ಬದಿ ನೀರು ನಿಂತಿತ್ತು.. ಈ ಹಿನ್ನೆಲೆ ವಾಹನಗಳು, ಸಾರ್ವಜನಿಕರು ಓಡಾಡಲು ಭಾರೀ ತೊಂದರೆ ಆಗಿತ್ತು. ಈ ಹಿನ್ನೆಲೆ ಟ್ರಾಫಿಕ್ ಪೊಲೀಸರು ಸ್ವತಃ ಕೆಲ ಸಲಕರಣೆಗಳನ್ನು ಬಳಸಿ ನೀರು ಚರಂಡಿಗೆ ಹೋಗುವಂತೆ ಮಾಡಿದ್ದಾರೆ.