Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಿಡಿಗೇಡಿಗಳ ಕೊನೆಯ ಅಸ್ತ್ರವೇ ಅಪಪ್ರಚಾರ

ಕಿಡಿಗೇಡಿಗಳ ಕೊನೆಯ ಅಸ್ತ್ರವೇ ಅಪಪ್ರಚಾರ
bangalore , ಸೋಮವಾರ, 15 ಮೇ 2023 (18:50 IST)
ಬಿಜೆಪಿ ಪಕ್ಷ ಸೋತ ಬಳಿಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್ ವಿರುದ್ಧ ಕೆಲವರು ಟೀಕಾ ಪ್ರಹಾರ ನಡೆಸಿದ್ರು.. ಕೆಲವರು ಸೋಶಿಯಲ್​ ಮಿಡಿಯಾದಲ್ಲಿ ಸಂತೋಷ್ ಕಾಲೆಳೆದಿದ್ರು. ಇದಕ್ಕೆ ಮಾಜಿ ಸಚಿವ C.N ಅಶ್ವತ್ಥ್​​ ನಾರಾಯಣ್​​ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್​​ ಮಾಡಿರುವ ಅವರು, ​​​​ಭಾರತೀಯ ಜನತಾ ಪಾರ್ಟಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿರುವವರು B.L ಸಂತೋಷ್​​​.. ಅವರು ನಮ್ಮ ಪಕ್ಷದ ಅಸಂಖ್ಯ ಕಾರ್ಯಕರ್ತರನ್ನು ಅಣಿಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವವರಲ್ಲಿ ಒಬ್ಬರು.. ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಬರಹಗಳು ಹೊರಬರುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅವರು ಯಾವುದೇ ಅಧಿಕಾರದ ಆಸೆ ಇಲ್ಲದೇ, ತಮ್ಮ ಜೀವನವನ್ನು ಪಕ್ಷ ಸಂಘಟನೆ ಹಾಗೂ ರಾಷ್ಟ್ರದ ಶ್ರೇಯಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅಂಥಹ ವ್ಯಕ್ತಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಕಿಡಿಗೇಡಿಗಳ ಕೊನೆಯ ಅಸ್ತ್ರವೇ ಅಪಪ್ರಚಾರ. ಇಂತಹ ನಕಾರಾತ್ಮಕ ಸುದ್ದಿಗಳನ್ನು ಹರಿಬಿಟ್ಟು ಭಾರತೀಯ ಜನತಾ ಪಾರ್ಟಿಯ ಶಕ್ತಿಯನ್ನು ಕುಂದಿಸುವ ಯತ್ನ ವಿಫಲ ಪ್ರಯತ್ನವಿದು.. ಸೋಲಿನ ಆತ್ಮವಿಮರ್ಶೆ ಆಗಲಿದೆ. ಅದು‌ ಮುಂದಿನ ಗೆಲುವಿನ ದಾರಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂದಾನಗರಿ ಶಾಸಕರಿಗೆ ಸಿಗುತ್ತಾ ಮಂತ್ರಿಗಿರಿ?