ರಾಜ್ಯದಲ್ಲಿ ಕೊರೊನಾ ಎರಡನೇ ಡೋಸ್ ಹಾಕಿಸಿಕೊಳ್ಳಲು ಜನರ ಹಿಂದೇಟು ಹಾಕ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರ ವಿರುದ್ದ ವಿಶೇಷ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಎಲ್ಲರಿಗೂ ಲಸಿಕೆ ಸಿಗಬೇಕೆಂಬ ಉದ್ದೇಶದಿಂದ ಸಿಂಗಾಪೂರ್ ಮಾಡೆಲ್ ಬಗ್ಗೆ ಆರೋಗ್ಯ ಸಚಿವರ ಬಳಿ ತಾಂತ್ರಿಕ ಸಲಹಾ ಸಮಿತಿ ತಜ್ಞರು ಪ್ರಸ್ತಾಪಿಸಿದ್ದಾರೆ.ಯಾರು ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲವೋ ಅವರಿಗೆ ಉಚಿತ ಚಿಕಿತ್ಸೆ ನಿರಾಕರಿಸಲಾಗುತ್ತದೆ. ಈಗಾಗಲೇ ಸಿಂಗಾಪುರದಲ್ಲಿ ರೂಲ್ಸ್ ಜಾರಿಯಲ್ಲಿದೆ. ಸಿಂಗಾಪುರದ ಮಾಡೆಲ್ ಜಾರಿಗೆ ತಂದರೆ ವ್ಯಾಕ್ಸಿನೇಷನ್ ರೀಚ್ ಆಗಬಹುದು ಎಂದು ತಾಂತ್ರಿಕ ಸಮಿತಿ ವಿಶ್ವಾಸ ವ್ಯಕ್ತಪಡಿಸಿದೆ.