Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಷ್ಟ್ರಮಟ್ಟದ ಶೂಟಿಂಗನಲ್ಲಿ ರಾಜ್ಯದ ಪ್ರತಿಭೆಗೆ ಬೆಳ್ಳಿ ಪದಕ

ರಾಷ್ಟ್ರಮಟ್ಟದ ಶೂಟಿಂಗನಲ್ಲಿ ರಾಜ್ಯದ ಪ್ರತಿಭೆಗೆ ಬೆಳ್ಳಿ ಪದಕ
ಹುಬ್ಬಳ್ಳಿ , ಶುಕ್ರವಾರ, 7 ಡಿಸೆಂಬರ್ 2018 (19:56 IST)
ಕೇರಳದ ತಿರುವಂತಪುರದಲ್ಲಿ ನಡೆದ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಕ್ರೀಡಾಪಟುಗಳು ಬೆಳ್ಳಿ ಪದಕ ಜಯಿಸಿದ್ದಾರೆ.

ಕೇರಳದ ತಿರುವಂತಪುರದಲ್ಲಿ  ನ.11 ರಿಂದ ಡಿ.7 ರವರೆಗೆ ನಡೆದ 62 ನೇ ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಹರ್ಷಾ ಮತ್ತು ಜ್ಯೋತಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ ಎಂದು ರವಿಚಂದ್ರ ಬಾಲೇಹೊಸೂರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮೂರು ಬೆಳ್ಳಿ, 5 ಶೂಟರ್ಸ್ ಇಂಡಿಯನ್ ಟೀಮ್ ಟ್ರಾಯಲ್ಸ್ ಗೆ ಕ್ವಾಲಿಫೈಯರ್ ಆಗಿದ್ದಾರೆ. ಅದರಲ್ಲಿ  ಏರ್ ರೈಫಲ್ ಪ್ಯಾರಾ ವಿಭಾಗದ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಹರ್ಷಾ ದೇವರಡ್ಡಿ, ಜ್ಯೋತಿ ಸಣ್ಣಕ್ಕಿ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇದರಿಂದ 63 ನೇ ನ್ಯಾಶನಲ್ ಶೂಟಿಂಗ್ ಚಾಂಪಿಯನ್ ಶಿಪ್ ಗೆ ಕುಶಾಲ ರಾಮಣ್ಣವರ, ಪ್ರಭು ಬೈರವಾಡಗಿ, ನೀಲ್ ಶ್ಯಾಡಗುಪ್ಪಿ, ನಾರಾಯಣ ತಾತುಸ್ಕರ, ಪ್ರಥಮ ನಾಯಕ ಆಯ್ಕೆಯಾಗಿದ್ದಾರೆ. ಮುಂದೆ ಹರ್ಷಾ ದೇವರಡ್ಡಿ ಏರ್ ರೈಫಲ್ ಸ್ಟಾಂಡಿಂಗ್ ನಲ್ಲಿ‌ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಲೇವಲ್ -3 ಗೆ ಆಯ್ಕೆಯಾಗಿದ್ದಾರೆ.  ಅಕಾಡೆಮಿಯ ಸಹಜಾ ಜಯಕುಮಾರ, ಅಕ್ಷತಾ ಹರಕುಣಿ , ಮಹಮ್ಮದ್ ಜಿಶಾನ್ ಬುಡನಖಾನ ಶಿಶಿರ ಎಂ. ಅನಮೊಲ ತೋಟದ ಏರ್ ರೈಫಲ್ ವಿಭಾಗದಲ್ಲಿ ಮಹಿಳೆ, ಪುರುಷ ವಿಭಾಗದಲ್ಲಿ ಇಂಡಿಯನ್ ಟೀಮ್ ಟ್ರಾಯಲ್ಸ್ ಗೆ ಆಯ್ಕೆ ಆಗಿ ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮರೆಸಿದ್ದಾರೆ ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ