ಬೆಂಗಳೂರು-ಹಿಂದೂಗಳ ಬಹುವರ್ಷಗಳ ಕನಸಿಗೆ ಕೆಲವೇ ಕೆಲವು ಗಂಟೆ ಬಾಕಿ ಇದೆ.ಪ್ರತಿ ಮನೆ..ಮನೆಯಲ್ಲಿಯೂ ಜಯ ಶ್ರೀ ರಾಮನ ನಾಮ ಸ್ಮರಣೆ ಇದೆ.ಮಗಳ ಕೆನ್ನೆಯ ಮೇಲೆಯೇ ಶ್ರೀರಾಮನ ಚಿತ್ರ ಕಲಾವಿದ ಬಿಡಿಸಿದ್ದಾರೆ.ಕಲಾವಿದ ಯಲ್ಲಪ್ಪ ವೈ.ಕುಂಬಾರ ಕಲೆಗೆ ಜನ್ರು ಫಿದಾ ಆಗಿದ್ದಾರೆ.ಶ್ರೀರಾಮನ ಆಗಮನವನ್ನು ನಮ್ಮಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕಲಾವಿದ ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ಪ್ರಯುಕ್ತ ಸಿಲಿಕಾನ್ ಸಿಟಿಯಲ್ಲಿ ಸಂಭ್ರಮದ ವಾತಾವರಣವಿದೆ.ದೇವಾಲಗಳಲ್ಲಿ ವಿಷೇಶ ಪೂಜೆ ಪುನಾಸ್ಕಾರ ನಡೆಯುತ್ತಿದೆ.ರಾಮ ಮಂದಿರ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಬೆಳ್ಳಿಗಿನಿಂದಲೇ ಪೂಜೆಗಳು ನಡೆಯುತ್ತಿದೆ.
ಸಿಲಿಕಾನ್ ಸಿಟಿ ತುಂಬೆಲ್ಲಾ ಜೈ ಶ್ರೀ ರಾಮ್ ಬಾವುಟಗಳು ಹಾರಡುತ್ತಿದೆ.ವಿವಿಧೆಡೆ ಅಯೋಧ್ಯೆ ರಾಮ ಮಂದಿರದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.ಶಾಲಾ ಕಾಲೇಜು ಆಫೀಸ್ ಸೇರಿದಂತೆ ಎಲ್ಲೆಡೆ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.ಹೋಟೆಲ್ ಅಸೋಸಿಯೇಷನ್ ಗಳಿಂದಲೂ ವಿಷೇವಾಗಿ ಈ ದಿನ ಆಚರಿಸಲು ಸಿದ್ದತೆ ಮಾಡಲಾಗಿದೆ.ಸಿಹಿ ಹಂಚುವ ಮೂಲಕ ಈ ದಿನ ಆಚರಿಸಲು ಸಿಲಿಕಾನ್ ಸಿಟಿ ಜನರು ಸಜ್ಜಾಗಿದ್ದಾರೆ.