Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

1ನೇ ತರಗತಿಯಿಂದಲೇ ಇಂಗ್ಲೀಷ್ ಪಠ್ಯ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್

1ನೇ ತರಗತಿಯಿಂದಲೇ ಇಂಗ್ಲೀಷ್ ಪಠ್ಯ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
bengaluru , ಬುಧವಾರ, 15 ಮಾರ್ಚ್ 2017 (14:10 IST)
ಚುನಾವಣೆ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಬಜೆಟ್`ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಏನೇನು ಸಿಕ್ಕಿದೆ ಎಂಬುದರ ಹೈಲೇಟ್ಸ್ ಇಲ್ಲಿದೆ.

ಸಿದ್ದರಾಮಯ್ಯ ಬಜೆಟ್`ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಿಕ್ಕಿದ್ದು

-      ಒಂದನೇ ತರಗತಿಯಿಂದಲೇ ಇಂಗ್ಲೀಷ್ ಪಠ್ಯಭೋದನೆ
-      ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವವರಿಗೆ ಲ್ಯಾಪ್ ಟಾಪ್ ವಿತರಣೆ.1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ
-      6 ಹೊಸ ಮೆಡಿಕಲ್ ಕಾಲೇಜು
-      ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಜೀವನ ಕ್ರಮ ಆಧರಿತ ರೋಗಗಳ ಚಿಕಿತ್ಸೆಗೆ ದಾವಣಗೆರೆ, ತುಮಕೂರು, ರಾಮನಗರ, ವಿಜಯಪುರ, ಕೋಲಾರದಲ್ಲಿ ತಲಾ 25 ಕೋಟಿ ವೆಚ್ಚದಲ್ಲಿ 5 ಹೊಸ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ
-      ಅಂಗನವಾಡಿ ಮಕ್ಕಳಿಗೆ 2 ದಿನ ಮೊಟ್ಟೆ, 5 ದಿನ ಹಾಲು ವಿತರಣೆ
-      ಶೂ ಮತ್ತು ಸಾಕ್ಸ್ ವಿತರಣೆ
-      8 ರಿಂದ 10ನೇ ತರಗತಿ ಹೆಣ್ಣುಮಕ್ಕಳಿಗೆ ಚೂಡಿದಾರ್ ಸಮವಸ್ತ್ರ
-      ಉನ್ನತ ಶಿಕ್ಷಣ ಇಲಾಖೆಗೆ 4,401 ಕೋಟಿ ರೂ. ಅನುದಾನ
-      ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ತಲಾ 4 ಕೋಟಿ ರೂ. ವೆಚ್ಚದಲ್ಲಿ 25 ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ
-      ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ 25 ಕೋಟಿ ರೂ ಅನುದಾನ
-      `ಜನೌಷಧಿ ಔಷಧಿ ಮಳಿಗೆಗಳ’ ಯೋಜನೆಯಡಿ 200 ಹೊಸ ಜೆನಿರಿಕ್ ಔಷಧಿ ಮಳಿಗೆಗಳ ಆರಂಭ
-      - 114 ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ
-      ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ 145 ಚಿಕಿತ್ಸಾ ಕೇಂದ್ರಗಳ ಸ್ಥಾಪನೆ

   

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ 2017: ಕೃಷಿಕರಿಗೆ ಸಿದ್ಧರಾಮಯ್ಯ ಕೊಡುಗೆ