ಬೆಂಗಳೂರು : ಇನ್ನು ಬಹುಮತ ಸಾಬೀತು ಮಾಡದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಸ್ಪೀಕರ್ ಸಮಯವನ್ನು ನಿಗದಿ ಮಾಡಿದ್ದಾರೆ. ಸಂಜೆ 5 ರಿಂದ 6ಕ್ಕೆ ಬಹುಮತವನ್ನು ಕೇಳುತ್ತಾರೆ. ಮೈತ್ರಿಗೆ ಬಹುಮತ ಇಲ್ಲ ಅಂದರು ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಆಟ ಆಡುತ್ತಿದ್ದಾರೆ. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಡಿಕೆ ಶಿವಕುಮಾರ್ ಅವರ ವೈಯಕ್ತಿಕ ವರ್ಚಸ್ಸು ಹಾಳಾಗುತ್ತಿದೆ ಎಂದು ಹೇಳಿದ್ದಾರೆ.
ಸಿಎಂ ಅಧಿಕಾರಕ್ಕೆ ಅಂಟಿಕೂರಲ್ಲ ಎನ್ನುತ್ತಾರೆ. ಆದರೂ ರಾಜೀನಾಮೆ ಕೊಡದೆ ಹಾಗೇ ಇದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವವಿದೆ. ಸಿದ್ದರಾಮಯ್ಯರಿಗೆ ವೈಯಕ್ತಿಕ ವರ್ಚಸ್ಸಿದೆ. ಆದ್ದರಿಂದ ಅವರು ಸರ್ಕಾರದ ಪರವಾಗಿ ನಿಲ್ಲಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.