ಶ್ರೀರಾಮುಲು ವಾಲ್ಮೀಕಿ ಅಂತ, ಸಿದ್ದರಾಮಯ್ಯ ಕುರುಬ ಅಂತೇಳಿ ರಾಜಕಾರಣ ಮಾಡೋಕೆ ಬಂದಿಲ್ಲ. ಬಾದಾಮಿಯಲ್ಲಿ ಬಿಜೆಪಿ - ಕಾಂಗ್ರೆಸ್ ಅಂತ ಚುನಾವಣೆ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಸಿಎಂ ಸೂಚನೆಯಂತೆ ಬಾದಾಮಿಯಲ್ಲಿ ಸಭೆ ಕರೆದಿದ್ದೇವೆ. ಎಲ್ಲ ಮುಖಂಡರೊಂದಿಗೆ ಚಚಿ೯ಸಿ ಅಭಿಪ್ರಾಯ ಪಡೆದು ಚುನಾವಣೆ ಕಾಯ೯ತಂತ್ರ ರೂಪಿಸ್ತೇವೆ. ಈಗಾಗಲೇ ನಮ್ಮ ಟೀಮ್ ಗ್ರೌಂಡ ಲೇವಲ್ ನಲ್ಲಿ ಕೆಲಸ ಮಾಡುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಬಾದಾಮಿಯಲ್ಲಿ ಕಾಂಗ್ರೆಸ್ ನಲ್ಲಿ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳಿವೆ ಅದು ಸಹಜ, ಅವನ್ನ ಚಚಿ೯ಸಿ ಸರಿದೂಗಿಸುತ್ತೇವೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಎಲ್ಲವನ್ನ ಮರೆತು ಸಿಎಂ ಗೆಲುವಿಗೆ ಶ್ರಮಿಸುತ್ತೆವೆ. ಸಿಎಂ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡುತ್ತೇವೆ.
ಬಾದಾಮಿಗೆ ಎರಡ್ಮೂರು ದಿನಕ್ಕೊಮ್ಮೆ ಬಂದು ಇಲ್ಲಿನ ಸ್ಥಿತಿಗತಿ ಬಗ್ಗೆ ಅವಲೋಕಿಸುತ್ತೇನೆ ಎಂದು ಬಾದಾಮಿಯಲ್ಲಿ ಮಾಜಿ ಸಚಿವ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.