ಒಬ್ಬ ಮುಖ್ಯಮಂತ್ರಿಯಾಗಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋತು ಸುಣ್ಣವಾಗಿರೋ ಸಿದ್ಧರಾಮಯ್ಯ ತಾನು ಮತ್ತೆ ಮುಖ್ಯಮಂತ್ರಿ ಆಗ್ತೇನೆ ಎಂದು ಹಗಲುಗನಸು ಕಾಣ್ತಿದ್ದಾರೆ.
ಹೀಗಂತ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಪರಸ್ಪರ ಹಾವು -ಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಜೆಡಿಎಸ್- ಕಾಂಗ್ರೆಸ್ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದವು. ಆ ಬಳಿಕ ಪರಸ್ಪರ ದೋಷಾರೋಪಣೆ ಮಾಡಿಕೊಂಡು ಕಿತ್ತಾಡಿಕೊಂಡು ಸರ್ಕಾರ ಪಥನವಾಗಿದ್ದನ್ನು ಕಂಡಿದ್ದೇನೆ.
ಸಿದ್ದರಾಮಯ್ಯ ಒಬ್ಬ ದುರಹಂಕಾರಿ ರಾಜಕಾರಣಿಯಾಗಿದ್ದಾರೆ. ದಲಿತ ನಾಯಕನಾದ ನನ್ನನ್ನು ಏಕಾಏಕಿ ಕೈಬಿಟ್ಟು ದಬ್ಬಾಳಿಕೆ ನಡೆಸಿದ್ದಾರೆ ಎಂದು ದೂರಿದರು.
ಡಿಸೆಂಬರ್ 9ರಂದು ರಾಜ್ಯದ ಜನತೆ ಅವಕಾಶವಾದಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತಿರಸ್ಕರಿಸಿ ಬಿಜೆಪಿ ಪರವಾದ ತೀರ್ಪನ್ನು ನೀಡಲಿದ್ದಾರೆ ಎಂದೂ ಹೇಳಿದ್ರು.