Webdunia - Bharat's app for daily news and videos

Install App

ಬೆಂಗಳೂರಿನ ಬಿಡಿಎ ಸೈಟ್ ಖರೀದಿಸಿದವರಿಗೆ ಶಾಕ್: ಮನೆ ಕಟ್ಟದಿದ್ದರೆ ಬೀಳುತ್ತೆ ದಂಡ!

Webdunia
ಬುಧವಾರ, 1 ಜೂನ್ 2022 (19:41 IST)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಖರೀದಿಸಿದವರು 5 ವರ್ಷದಲ್ಲಿ ಮನೆ ಕಟ್ಟದಿದ್ದರೆ ದಂಡ ವಿಧಿಸಲು ಬಿಡಿಎ ಮುಂದಾಗಿದೆ. ಈ ಮೂಲಕ ನಿವೇಶನ ಖರೀದಿದಾರರಿಗೆ ಬಿಗ್ ಶಾಕ್ ನೀಡಿದೆ.
ಬಿಡಿಎನಲ್ಲಿ ಸೈಟ್ ಪಡೆದ 5 ವರ್ಷದೊಳಗೆ ಮನೆ ಕಟ್ಟದೇ ಖಾಲಿ ಬಿಟ್ಟಿದ್ದರೆ ನಿವೇಶನದ ಅಳತೆ ಆಧಾರದ ಮೇಲೆ ದಂಡ ವಿಧಿಸಲು ಬಿಡಿಎ ಮುಂದಾಗಿದೆ.
20x40 ಸೈಟಿಗೆ 15,000 ರೂ., 30x40 ಸೈಟಿಗೆ 60,000 ರೂ. 60x40 ಸೈಟಿಗೆ 3.75 ಲಕ್ಷ ರೂ. ಹಾಗೂ 50x80 ಸೈಟಿಗೆ 6 ಲಕ್ಷ ರೂ. ದಂಡ ವಿಧಿಸಲು ಬಿಡಿಎ ಮುಂದಾಗಿದೆ.
ಖಾಲಿ ನಿವೇಶನಗಳ ಮೇಲೆ ದಂಡ ವಿಧಿಸಲು ಬಿಡಿಎ ಯಾವ ಕಾರಣಕ್ಕೆ ಮುಂದಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರ ಬಿಡಿಎ ಈ ಹೊಸ ನಿಯಮಕ್ಕೆ ನಿವೇಶನ ಖರೀದಿದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡಿಎ ನಿವೇಶನ ಹಂಚಿದ ಮೇಲೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸಬೇಕಾಗಿರುವುದು ನಿಗಮದ ಕರ್ತವ್ಯ. ಖಾಲಿ ಜಾಗ ನೀಡಿ ಕೈತೊಳೆದುಕೊಳ್ಳುವುದು ಅಲ್ಲ. ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಮೂಲಸೌಕರ್ಯ ಒದಗಿಸಿಲ್ಲ. ಅಲ್ಲದೇ ನ್ಯಾಯಾಲಯದ ಆದೇಶವನ್ನು ಕೂಡ ಪಾಲಿಸಿಲ್ಲ ಎಂದು ಬಿಡಿಎ ನಿವೇಶನ ಖರೀದಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments