ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್‌ರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದ್ದು ಅವರಿಗೆ 3 ಬಿಳಿ ಸೀರೆ, 1 ತಟ್ಟೆ, 1 ಚೆಂಬು, 1 ಜಮಖಾನಾ, 1 ದಿಂಬು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಶಿಕಲಾರನ್ನು ಸಾಮಾನ್ಯ ಮಹಿಳೆಯರ ಸೆಲ್‌ಗೆ ವರ್ಗಾಯಿಸಲಾಗಿದ್ದು ಸಾಮಾನ್ಯ ಕೈದಿಯಂತೆಯೇ ಶಿಕ್ಷೆ ಅನುಭವಿಸಲಿದ್ದಾರೆ. ಅವರಿಗೆ ಭಾನುವಾರದಂದು ಯಾವ ಕೆಲಸದ ಹೊಣೆ ನೀಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಶಶಿಕಲಾ ಪ್ರತಿ ದಿನದ ಕೆಲಸದ ಭತ್ಯೆಯಾಗಿ 50 ರೂಪಾಯಿಗಳನ್ನು ನೀಡಲಾಗುತ್ತಿದ್ದು, ವಾರಕ್ಕೆ ಒಂದು ದಿನದ ರಜೆ ನೀಡಲಾಗುವುದು. ಅವರಿಗೆ ಯಾವುದೇ ವಿಶೇಷ ಸೌಲಭ್ಯಗಳು ನೀಡಲು ಸಾಧ್ಯವಿಲ್ಲ ಎಂದತು ಜೈಲಿನ ಅಧಿಕಾರಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.