ರಾಜ್ಯ ಘಟಕದೊಳಗಿನ ಪಕ್ಷಪಾತ, ದ್ವೇಷದ ವಿರುದ್ಧ ತೀವ್ರವಾದ ಎಚ್ಚರಿಕೆಯನ್ನು ನೀಡಿ ಭ್ರಷ್ಟಾಚಾರ ಮತ್ತು ಜಾತಿ ಧ್ರುವೀಕರಣದ ವಿಚಾರಗಳ ಬಗ್ಗೆ ಬಿಜೆಪಿ ಮುಖಂಡರ ಕಾರ್ಯವೈಖರಿಯ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ರಾಜ್ಯ ಘಟಕವನ್ನು ಹುರಿದುಂಬಿಸಲು ಮೂರು ದಿನಗಳ ಭೇಟಿಗಾಗಿ ಬೆಂಗಳೂರಿನಲ್ಲಿ ಆಗಮಿಸಿದ ಶಾ, ಕಾದಾಡುತ್ತಿದ್ದ ಬಣಗಳ ಮೇಲೆ ಚಾವಟಿ ಹಾಕಿ, ಪಕ್ಷಕ್ಕೆ ನಿಷ್ಠರಾಗಿರುವಂತೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ.
"ಪಕ್ಷವು ಯಾವುದೇ ರೀತಿಯ ಅಶಿಸ್ತಿನನ್ನೂ ತಡೆದುಕೊಳ್ಳುವುದಿಲ್ಲ. ಎಲ್ಲ ಕಾರ್ಯಕರ್ತರು ಪಕ್ಷದ ರೇಖೆಯಲ್ಲಿ ಒಂದು ಕುಟುಂಬವಾಗಿ ಕೆಲಸ ಮಾಡಬೇಕು ಎಂದು ಬಿ.ಎಸ್. ಯಡಿಯೂರಪ್ಪ ಮತ್ತು ಕೆ ಎಸ್ ಈಶ್ವರಪ್ಪ ಸೇರಿದಂತೆ ಹಿರಿಯ ರಾಜ್ಯ ಘಟಕದ ನಾಯಕರಿಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಕೆಲವು ರಾಜ್ಯ ಪದಾಧಿಕಾರಿಗಳು ದ್ವೇಷವನ್ನು ಅಂತ್ಯಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಯತ್ನಿಸಿದಾಗ, ನಾವು ಅದನ್ನು ನೋಡಿಕೊಳ್ಳುತ್ತೇವೆ, ಚಿಂತೆ ಬೇಡ. ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಗಮನಹರಿಸಿರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.