ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಸಿಡಿಪಿಓರನ್ನು ಬಂಧಿಸಲಾಗಿದ್ದು, ಡಿ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಲಬುರಗಿ ಗ್ರಾಮೀಣ ಸಿಡಿಪಿಒ ಸಿವಿ ರಾಮನ್ ಬಂಧನವಾಗಿದೆ. ಡಿಸೆಂಬರ್ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು,
ಡಿಸೆಂಬರ್ 24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ.
ಸಿ ವಿ ರಾಮನ್ ಕಲಬುರ್ಗಿ ತಾಲೂಕ ಗ್ರಾಮೀಣ ಸಿಡಿಪಿಒ ಆಗಿದ್ದರು. ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಕೆಲವು ದಿನಗಳ ಹಿಂದೆ ರಾಮನ್ ಅವರನ್ನು ಅಮಾನತುಗೊಳಿಸಿದ್ದರು.