Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಕ್ ಬ್ಯಾಗ್ ಗಂಭೀರ ಆರೋಪ

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ  ಕಿಕ್ ಬ್ಯಾಗ್ ಗಂಭೀರ ಆರೋಪ
bangalore , ಭಾನುವಾರ, 30 ಅಕ್ಟೋಬರ್ 2022 (14:25 IST)
ಬಿಜೆಪಿ  ಎನ್ ಆರ್ ರಮೇಶ್ ಇಂದು ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ನಾಳೆ ಎನ್ ಆರ್ ರಮೇಶ್ ದೂರು ನೀಡಲಿದ್ದಾರೆ.
 
ಸಿದ್ದರಾಮಯ್ಯ ಸಿಎಂ ಆದ ವೇಳೆ ಪ್ರಭಾವಿ ವ್ಯಕ್ತಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪವನ್ನ ಎಸ್ ಆರ್ ರಮೇಶ್ ಮಾಡಿದ್ದಾರೆ.ಕಿಂಗ್ಸ್ ಕೋರ್ಟ್ ಎಲ್ ವಿವೇಕಾನಂದರಿಂದ 1.30 ಕೋಟಿ ಚೆಕ್ ಮೂಲಕ ಹಣ ಪಡೆದಿರುವುದನ್ನ  ಎನ್ ಆರ್ ರಮೇಶ್ ದಾಖಲೆ ಸಮೇತ ಇಂದು  ಬಿಡುಗಡೆ ಮಾಡಿದ್ದಾರೆ.ಬೆಂಗಳೂರು ಟರ್ಫ್ ಕ್ಲಬ್ ಉತ್ಸುವಾರಿ ಹುದ್ದೆಗೆ 2014 ರಲ್ಲಿ ವಿವೇಕಾನಂದ ನೇಮಕವಾಗಿದರು.3 ವರ್ಷದ ಅವಧಿಗೆ ನೇಮಕಮಾಡಿ ಆದೇಶವನ್ನ ಸಿದ್ದರಾಮಯ್ಯ ಮಾಡಿದರು.ಲೋಕಾಯುಕ್ತ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ವಿವೇಕ್ ರಿಂದ ಸಾಲ ಪಡೆದಿದ್ದಾಗಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಇಲಾಖೆ ನಿಯಮದ ಪ್ರಕಾರ ಹುದ್ದೆ ನೀಡಿ ಉಡುಗೊರೆ, ಚೆಕ್ ಪಡೆಯುವಂತಿಲ್ಲ.ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಾಲಂ 7,8,9,10,13 ಅಡಿ ದುಡ್ಡು ಪಡೆದಿರೋದು ಶಿಕ್ಷಾರ್ಹ ಅಪರಾಧವಾಗಿದೆ.ಈ ಬಗ್ಗೆ ನಾಳೆ ದೂರು ದಾಖಲಿಸಲು ಎನ್ ಆರ್ ರಮೇಶ್ ನಿಂತಿದ್ದಾರೆ.
 
ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ವಂಚನೆ ಪ್ರಕರಣದ ದೂರು ದಾಖಲಿಸಲು ಎನ್ ಆರ್ ರಮೇಶ್ ನಿರ್ಧಾರ ಮಾಡಿದ್ದಾರೆ.ಸಿಬಿಐ, ಸಿಐಡಿ, ನ್ಯಾಯಾಂಗ ತನಿಖೆಗೆ ಎನ್ ಆರ್ ರಮೇಶ್ ಆಗ್ರಹಿಸಿದ್ದಾರೆ.ಸಿಎಂ ಗಮನಕ್ಕೆ ಈಗಾಗಲೇ ಎನ್ ಆರ್ ರಮೇಶ್ ತಂದಿದ್ದು,ಸಿಎಂ ಈ ಬಗ್ಗೆ ಸೂಕ್ತ ತನಿಖೆಗೆ ವಹಿಸೋ ನಂಬಿಕೆ ಇದೆ ಎಂದು ದಾಖಲೆ ಬಿಡುಗಡೆ ಮಾಡಿದ ಬಳಿಕ ಎನ್ ಆರ್ ರಮೇಶ್ ಹೇಳಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ