ಉಪಚುನಾವಣೆ ಸಂದರ್ಭದಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಿಸಿದ್ದು ಯಾಕೆ? ಬದಲಾವಣೆ ಸರಿ ಕಾಣುತ್ತಿಲ್ಲ. ಇವರೇನು ಕಾಂಗ್ರೆಸ್ ಕಟ್ಟುತ್ತಿದ್ದಾರಾ ಕೆಡುವುತ್ತಿದ್ದಾರಾ? ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಕೆಪಿಸಿಸಿಗೆ ನೇರ ಪ್ರಶ್ನೆ ಹಾಕಿದ್ದಾರೆ.
ಅವರು ನನ್ನ ಪರವಾಗಿದ್ದಾರೆ ಎಂದು ಪಕ್ಷದಿಂದ ತೆಗೆದಿರಬಹುದು. ಆಸ್ತಿ ಕಬಳಿಕೆಗೆ ವಿರೋಧವಾಗಿದ್ದಾರೆ ಎಂದು ಅವರನ್ನು ಬದಲಿಸಿರಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಸರಕಾರವನ್ನು ಹೇಗೆ ಬೇಕಾದರೂ ಹಾಳು ಮಾಡಿ ಆದರೆ, 130 ವರ್ಷದ ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಮೈಸೂರು-ಚಾಮರಾಜನಗರದಲ್ಲಿ ಕಾಂಗ್ರೆಸ್ ಸಂಬಂಧ ಏನೇ ಆದರೂ ಸಿಎಂ ಗಮನಕ್ಕೆ ಬರುತ್ತದೆ. ಮೈಸೂರು ಸಿಎಂ ತವರು ಕ್ಷೇತ್ರವಾಗಿದ್ದರಿಂದ ಹೈಕಮಾಂಡ್ ತಲೆಹಾಕಲ್ಲ.
ದೆಹಲಿಯಲ್ಲಿ ಕರ್ನಾಟಕದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿದ್ದಾರೆ. ದುರ್ದೈವ ಅವರು ಸಿಎಂ ಸಿದ್ದರಾಮಯ್ಯಗೆ ಹೆದರುವಂತೆ ಕಾಣುತ್ತದೆ. ಕರ್ನಾಟಕದಲ್ಲಿ ಅನೇ ಆದರೂ ಯಾರೂ ಮಾತನಾಡುವುದಿಲ್ಲ. ಕಾಂಗ್ರೆಸ್ ನಾಯಕರೇ ನೀವು ಹೋದರೂ ಪಕ್ಷ ಉಳಿಯುತ್ತದೆ ಎಂದು ಎಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.