ಶಿವಮೊಗ್ಗ: ರಾಜ್ಯದಲ್ಲಿ ಇಂದಿನಿಂದ ಶಾಲಾ- ಕಾಲೇಜು ಆರಂಭವಾಗುವ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸುವಂತೆ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.
ವಿಡಿಯೋ ಬಿಡುಗಡೆ ಮಾಡಿ, ಪೋಷಕರಿಗೆ ಮನವಿ ಮಾಡಿರುವ ಸಚಿವರು, ಕೋವಿಡ್ ಬಂದ ನಂತರದಲ್ಲಿ ನೇರ ಶಿಕ್ಷಣ ವ್ಯವಸ್ಥೆಯೇ ತಪ್ಪಿಹೋಗಿತ್ತು. ಕೋವಿಡ್ ಓಡಿಸುವಲ್ಲಿ ದೇಶ ಯಶಸ್ವಿಯಾಗುತ್ತಿದ್ದು, ಕರ್ನಾಟಕ ಕೂಡ ಅದೇ ಹಾದಿಯಲ್ಲಿದೆ. ಮೂರನೇ ಅಲೆ ಚರ್ಚೆ ನಡೀತಾ ಇದ್ರೂ, ಎಷ್ಟು ದಿನ ನಮ್ಮ ಮಕ್ಕಳನ್ನ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯ. ಮಕ್ಕಳಿಗೆ ಆರೋಗ್ಯದ ಜೊತೆಗೆ ಉತ್ತಮ ಶಿಕ್ಷಣವನ್ನು ಕೊಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ ಎಂದಿದ್ದಾರೆ.
ಮಕ್ಕಳು ಆರೋಗ್ಯವಂತರಾಗಿರಲು ಎನೂ ವ್ಯವಸ್ಥೆ ಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತದೆ. ಆರೋಗ್ಯ, ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪೋಷಕರು ಸಹಕಾರ ನೀಡುವಂತೆ ಸಚಿವ ಈಶ್ವರಪ್ಪ ಮನವಿ ಮಾಡಿದ್ದಾರೆ.