ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಉದ್ಯಮಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿರುವ ಗೋವಿಂದಪುರ ಪೆÇಲೀಸರು, ಆತನಿಂದ 15.50 ಲಕ್ಷ ಮೌಲ್ಯದ 403 ಎಕ್ಸ್‍ಟೆಸ್ಸಿ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾ ಮೂಲದ ಥಾಮಸ್ ಅನ್ಹಾಗ ಕಾಲು ಅಲಿಯಾಸ್ ಥಾಮಸ್ ಕಾಲು (47) ಬಂಧಿತ. ಆರೋಪಿಯಿಂದ 15.50 ಲಕ್ಷ ರೂ. ಮೌಲ್ಯದ 403 ಎಕ್ಸ್‍ಟೆಸ್ಸಿ ಮಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಬೈಕ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೆÇಲೀಸರು ತಿಳಿಸಿದರು.
ಆರೋಪಿಯು ಎಚ್.ಬಿ.ಆರ್. ಲೇಔಟ್‍ನ 5ನೇ ಬ್ಲಾಕ್‍ನಲ್ಲಿ ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಉದ್ಯಮಿಗಳಿಗೆ ಎಕ್ಸ್‍ಟೆಸ್ಸಿ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸ್ಥಳೀಯರು ಪೆÇಲೀಸರಗೆ ಮಾಹಿತಿ ನೀಡಿದರು. ಮಾಹಿತಿ ಆಧರಿಸಿ ಕೆ.ಜಿ ಹಳ್ಳಿ ಉಪ ವಿಭಾಗದ ಎಸಿಪಿ ಕೆ.ಎಸ್. ಜಗದೀಶ್ ಮಾರ್ಗದರ್ಶನದಲ್ಲಿ ಗೋವಿಂದಪುರ ಪೆÇಲೀಸ್ ಠಾಣೆ ಪೆÇಲೀಸ್ ಇನ್ಸ್‍ಪೆಕ್ಟರ್ ಆರ್. ಪ್ರಕಾಶ್, ಎಸ್‍ಐ ಲೋಕೇಶ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮಾಲುಗಳ ಸಮೇತ ಆರೋಪಿಯನ್ನು ಬಂಧಿಸಿದರು ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ತಿಳಿಸಿದರು.
ಬಾಡಿಗೆ ನೀಡಿದ್ದ ಮಾಲೀಕರ ವಿಚಾರಣೆ :
ಆರೋಪಿಗೆ ಯಾರು ಬಾಡಿಗೆ ಮನೆ ನೀಡಿದ್ದರು. ಏಕೆ ಸ್ಥಳೀಯ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿಲ್ಲ ಎಂಬ ಬಗ್ಗೆ ಮನೆ ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಲಾಗುವುದು. ಆರೋಪಿಯ ವೀಸಾ ಹಾಗೂ ಪಾಸ್‍ಪೆÇೀರ್ಟ್ ಅವಧಿಯನ್ನು ಪರಿಶೀಲಿಸಿ, ಅವಧಿ ಮುಗಿದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶರಣಪ್ಪ ಹೇಳಿದರು.