ಬೆಂಗಳೂರು : ಡ್ರಗ್ಸ್ ಮಾರಾಟ ಮತ್ತು ಸಾಗಾಣಿಕೆ ಮಾಡಲು ದಂಧೆಕೋರರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಪ್ಲಾನ್ ಮಾಡುವ ಆರೋಪಿಗಳು, ಬೇರೆ ಬೇರೆ ಮಾರ್ಗಗಳಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ನಗರದಲ್ಲಿ ಬೆಂಕಿ ಪೊಟ್ಟಣಗಳಲ್ಲಿ ಡ್ರಗ್ಸ್ ಇಟ್ಟು ಅವುಗಳ ಮೂಲಕ ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿದ್ದಾರೆ.
ಮೊದಲಿಗೆ ನಿರ್ಜನ ಪ್ರದೇಶಗಳು, ಖಾಲಿ ಸೈಟ್ಗಳು, ಬಸ್ಸ್ಟ್ಯಾಂಡ್ಗಳನ್ನು ಗುರುತು ಮಾಡಿಕೊಳ್ಳುವ ಆರೋಪಿಗಳು, ಅಲ್ಲಿ ಡ್ರಗ್ಸ್ ತುಂಬಿರುವ ಮ್ಯಾಚ್ ಬಾಕ್ಸ್ಗಳನ್ನು ಎಸೆದು ಹೋಗುತ್ತಿದ್ದರು. ಜೊತೆಗೆ ಆ ಮ್ಯಾಚ್ ಬಾಕ್ಸ್ನ ಫೋಟೋ ಮತ್ತು ಲೋಕೇಷನ್ ಶೇರ್ ಮಾಡುತ್ತಿದ್ದರು.