Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಸ್.ಡಿ.ಎಂ ಕಾಲೇಜಿಗೆ ರ‍್ಯಾಂಕ್‍ಗಳ ಸುರಿಮಳೆ

ಎಸ್.ಡಿ.ಎಂ ಕಾಲೇಜಿಗೆ ರ‍್ಯಾಂಕ್‍ಗಳ ಸುರಿಮಳೆ
Bangalore , ಮಂಗಳವಾರ, 7 ಫೆಬ್ರವರಿ 2017 (11:33 IST)
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿ.ಎ.ಎಂ.ಎಸ್ ಅಂತಿಮ ಪರೀಕ್ಷೆಗಳಲ್ಲಿ 6 ರ‍್ಯಾಂಕ್‍ ಹಾಗು ಎಂ.ಡಿ ಹಾಗು ಎಂ.ಎಸ್ ಸ್ನಾತಕೋತ್ತರ ವಿಭಾಗಗಳಲ್ಲಿ14 ರ‍್ಯಾಂಕ್‌ಗಳನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.
 
ಕು.ಸ್ವಾತಿಮುತ್ತು ಬಿ.ಎನ್  ಅವರು ಬಿ.ಎ.ಎಂ.ಎಸ್.ಅಂತಿಮ ಪರೀಕ್ಷೆಗಳಲ್ಲಿ ಪ್ರಥಮ ರ‍್ಯಾಂಕ್ ಹಾಗು ಬಿ.ಎ.ಎಂ.ಎಸ್ ಪದವಿಯ ಮೂರೂ ವರ್ಷಗಳ ಸರಾಸರಿ ಅಂಕ ಗಳಿಕೆಯಲ್ಲೂ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಕಾಯ್ದುಕೊಂಡು, 4 ಚಿನ್ನದ ಪದಕ ಗಳಿಸಿದ್ದಾರೆ. ಅವರ ಈ ಸಾಧನೆಗೆ ಮಹಾವಿದ್ಯಾಲಯದ ಈ ಸಾಲಿನ ಡಾ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ಪ್ರಶಸ್ತಿಯ ಗೌರವ ಗಳಿಸಿರುತ್ತಾರೆ.
 
ಇವರೊಡನೆ ಕು.ಕೀರ್ತಿ ನಂಬೂದರಿ ಬಿ.ಎ.ಎಂ.ಎಸ್ ಅಂತಿಮ ಪರೀಕ್ಷೆಯಲ್ಲಿ ದ್ವಿತೀಯ ರ‍್ಯಾಂಕ್, ಕು.ಅಮೃತಗೌರಿ ಐದನೇ ರ‍್ಯಾಂಕ್, ಕು.ಚೈತ್ರಾ ಡಿ.ಎಂ. ಆರನೇ ರ‍್ಯಾಂಕ್, ಕು. ಸೌಜನ್ಯಾ.ಜೆ. ಒಂಬತ್ತನೇ ರ‍್ಯಾಂಕ್ ಗಳಿಸಿದರೆ, ದಿಲೀಪ್ ವಾರಿಯರ್ ಸರಾಸರಿ ಅಂಕ ಗಳಿಕೆಯಲ್ಲಿ ಮೂರನೇ ರ‍್ಯಾಂಕ್ ಗಳಿಸಿ, ವಿಶ್ವವಿದ್ಯಾಲಯ ನೀಡುವ ಏಳು ಚಿನ್ನದ ಪದಕಗಳಲ್ಲಿ 6 ಪದಕಗಳು ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪಾಲಾಗಿವೆ. ಎಂ.ಡಿ ಹಾಗು ಎಂ.ಎಸ್.ಸ್ನಾತಕೋತ್ತರ ಅಂತಿಮ ಪರೀಕ್ಷೆಗಳಲ್ಲಿ ವಿವಿಧ ವಿಭಾಗಗಳಲ್ಲಿ 14 ರ‍್ಯಾಂಕ್‍ಗಳನ್ನು ವಿದ್ಯಾರ್ಥಿಗಳು ಪಡೆದಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ಎಸ್ ಎಂ ಕೃಷ್ಣಗೆ ನ್ಯಾಯ ಕೊಡಿಸುವ ಮೊದಲು ಬಿಜೆಪಿಯವರು ಮೊದಲು ಅಡ್ವಾಣಿಗೆ ಆದ ಅನ್ಯಾಯ ಸರಪಡಿಸಲಿ!’