Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಳೆ ನಡುವೆ ಗ್ರಾಹಕರ ಜೇಬಿಗೆ ಕತ್ತರಿ

ಮಳೆ ನಡುವೆ ಗ್ರಾಹಕರ ಜೇಬಿಗೆ ಕತ್ತರಿ
bangalore , ಶುಕ್ರವಾರ, 12 ನವೆಂಬರ್ 2021 (20:27 IST)
ರಾಜ್ಯ ಸೇರಿದಂತೆ ರಾಜಧಾನಿ ಮಂದಿಯನ್ನು ಮಳೆರಾಯ ಬಿಟ್ಟು ಬಿಡದೇ ಕಾಡುತ್ತಿದ್ದಾನೆ. ಈ ನಡುವೆ ಮಳೆಯಿಂದಾಗಿ ತರಕಾರಿ ಬೆಳೆ ಗಗನ ಮುಟ್ಟಿವೆ. 
 
ಮಾರುಕಟ್ಟೆಗೆ ಬರುತ್ತಿದ್ದ ತರಕಾರಿಗಳ ಪ್ರಮಾಣ ಕಡಿಮೆಯಾಗಿದೆ. ದುಡ್ಡು ಕೊಟ್ಟರೂ  ಉತ್ತಮ ತರಕಾರಿ ಸಿಗುತ್ತಿಲ್ಲ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ, ಬಹುತೇಕ ತರಕಾರಿಗಳ ಧಾರಣೆ 15 ರೂ. ನಿಂದ 20 ರೂ.ಗೆ ಹೆಚ್ಚಾಗಿದೆ.
 
ಬೆಂಡೆಕಾಯಿ 40ರಿಂದ 70 ರೂ.ಗೆ, ಬಟಾಣಿ 200ರಿಂದ 280 ರೂ.ಗೆ, ಮೂಲಂಗಿ 20ರಿಂದ 40 ರೂ., ಕ್ಯಾರೆಟ್ 70ರಿಂದ 90 ರೂ., ಈರುಳ್ಳಿ 30ರಿಂದ 60 ರೂ., ಟೊಮೇಟೊ 40ರಿಂದ 70 ರೂ., ಆಲೂಗಡ್ಡೆ  20ರಿಂದ 40 ರೂ., ನವಿಲು ಕೋಸು  40ರಿಂದ 120 ರೂ, ಹುರುಳಿಕಾಯಿ  50ರಿಂದ  70 ರೂ., ಕ್ಯಾಪ್ಸಿಕಂ 50 ರಿಂದ 80 ರೂ.ಗೆ ಏರಿಕೆಯಾಗಿದೆ.
 
ಅಕ್ಕಪಕ್ಕದ ರಾಜ್ಯಗಳಿಗೂ ಬೆಂಗಳೂರು ಮಾರುಕಟ್ಟೆಯಿಂದ ತರಕಾರಿ ಕಳಿಸಲಾಗುತ್ತಿತ್ತು. ಆದರೆ ಇದೀಗ ಬೆಂಗಳೂರಿಗೆ ಬರುವ ತರಕಾರಿ ಪ್ರಮಾಣ ಕಡಿಮೆಯಾಗಿರುವ ಕಾರಣ ಇತರೆ ರಾಜ್ಯಗಳಿಗೆ ಕಳಿಸಲು ಅಗುತ್ತಿಲ್ಲ ಎನ್ನುವುದಯ ವ್ಯಾಪಾರಸ್ಥರ ಮಾತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹವಾಮಾನ ವರದಿಯಲ್ಲಿ ಬರೋ ಆರೇಂಜ್, ಯೆಲ್ಲೊ, ರೆಡ್ ಅಲರ್ಟ್ ಗಳೆಂದರೆ ಏನು.?