Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ಪೀಕರ್ ಕೋಳಿವಾಡ ವಿರುದ್ಧ ಅಕ್ರಮ ಆರೋಪ

ಸ್ಪೀಕರ್ ಕೋಳಿವಾಡ ವಿರುದ್ಧ ಅಕ್ರಮ ಆರೋಪ
Bangalore , ಸೋಮವಾರ, 20 ಮಾರ್ಚ್ 2017 (10:13 IST)
ಬೆಂಗಳೂರು:  ರಾಜ್ಯವಿಧಾನಸಭೆ ಸ್ಪೀಕರ್ ಕೋಳಿವಾಡ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ.  ತಮ್ಮ ಮಕ್ಕಳಿಗೆ ಅಕ್ರಮವಾಗಿ ನಿವೇಶನ ಹಂಚಿದ್ದಾರೆಂದು ಅವರ ಮೇಲೆ ಆರೋಪ ಬಂದಿದೆ.

 

ಯಲಹಂಕ ಗಸ್ತಿ ಕೆಂಪನಹಳ್ಳಿ ಅಗ್ರಹಾರದಲ್ಲಿ ತಮ್ಮ ನಾಲ್ವರು ಹೆಣ್ಣು ಮಕ್ಕಳಿಗೆ ಅಕ್ರಮವಾಗಿ ಆಸ್ತಿ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. 100 x 100 ನಿವೇಶನವನ್ನು ತಾವೇ ಖುದ್ದಾಗಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ದೂರಲಾಗಿದೆ.

 
ಆ ನಿವೇಶನ ವಿವಾದಲ್ಲಿದ್ದು,  ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಿರುವಾಗ ಕೋಳಿವಾಡ ತಮ್ಮ ಪ್ರಭಾವ ಬಳಸಿ ಅಕ್ರಮವಾಗಿ ಇದನ್ನು ಮಕ್ಕಳಿಗೆ ಹಂಚಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸ್ಪೀಕರ್ ಪ್ರತಿಕ್ರಿಯೆ ಏನೆಂದು ಕಾದು ನೋಡಬೇಕಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮೌಲ್ವಿಗಳು ಇಂದು ಭಾರತಕ್ಕೆ ವಾಪಸ್