ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ನನ್ನ ಆಪ್ತ ಸಹಾಯಕ ಸಂತೋಷ್ ಪಾತ್ರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಮಹಾಲಕ್ಷ್ಮಿ ಪೊಲೀಸ್ ಠಾಣೆಯ ಎಸಿಪಿ ಬಡಿಗೇರ್ ನೇತೃತ್ವದ ತಂಡ ಮಧ್ಯರಾತ್ರಿ ನನ್ನ ಮನೆಗೆ ಬಂದು ಎನ್.ಆರ್. ಸಂತೋಷ್ ಬಗ್ಗೆ ವಿಚಾರಿಸಿದ್ದಾರೆ. ಸಂತೋಷ್ ಮನೆಯಲ್ಲಿ ಇಲ್ಲದಿರುವುದನ್ನು ತಿಳಿದು ವಾಪಸ್ ಮರಳಿದ್ದಾರೆ. ಸಂತೋಷ್ ಬಗ್ಗೆ ವಿಚಾರಣೆ ಮಾಡಲು ಮಧ್ಯರಾತ್ರಿ ನಮ್ಮ ಮನೆಗೆ ಬರುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿದ್ದಾರೆ.
ನನಗೆ ತಿಳಿದಮಟ್ಟಿಗೆ ಸಂತೋಷ್ ನಿರಪರಾಧಿಯಾಗಿದ್ದಾನೆ. ನಿರಪರಾಧಿಗಳಿಗೆ ಕಿರುಕುಳ ನೀಡುವುದು ಸರಿಯಲ್ಲ. ತನಿಖೆ ನಡೆಸುವುದಾದರೇ ಹಗಲು ಹೊತ್ತಿನಲ್ಲಿ ನಡೆಸಲಿ. ಸಂತೋಷ್ ನನ್ನ ಸಂಬಂಧಿ ಎನ್ನುವುದು ಸತ್ಯ ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಿ. ಆದರೆ, ಅನಗತ್ಯವಾಗಿ ಇತರರಿಗೆ ಕಿರುಕುಳ ನೀಡುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.