ಶಿವರಾಮ ಕಾರಂತ ಲೇಔಟ್ ಡಿನೋಟಿಫಿಕೇಶನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. 2012ರ ಏಪ್ರಿಲ್ 12ರಂದೇ ಅಂದಿನ ಸಿಎಂ ಸದಾನಂದಗೌಡರೇ ಈ ಡಿನೋಟಿಫಿಕೇಶನ್ ಪ್ರಕರಣದ ತನಿಖೆಗೆ ಸಿಐಡಿಗೆ ಆದೇಶಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಹೌದು, 2010ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಏಪ್ರಿಲ್`ನಲ್ಲೇ ಸದನದಲ್ಲಿ ನೀಡಿದ್ದ ಭರವಸೆ ಮೇರೆಗೆ ಂದಿನ ಸಿಎಂ ಸದಾನಂದಗೌಡ ತನಿಖಗೆ ಆದೇಸಿಸಿದ್ದರು. ಆದರೆ, ಆ ಬಳಿಕ ಎಫೈಆರ್ ದಾಖಲಾಗದಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಯಡಿಯೂರಪ್ಪ ವಿರುದ್ಧ ಎಸಿಬಿ ತನಿಖೆಗೆ ಮುಂದಾಗಿದೆ ಎಂದು ಆರೋಪಿಸಿರುವ ಬಿಜೆಪಿಗೆ ಇದು ತಿರುಗುಬಾಣವಾಗುವ ಸಾಧ್ಯತೆ ಇದೆ ಎಂದು ವಿಶ್ನೇಷಿಸಲಾಗುತ್ತಿದೆ. ಇತ್ತ, ಡಿನೋಟಿಫಿಕೇಶನ್ ಬಗ್ಗೆ ಆಕ್ಷೇಪ ಎತ್ತಿದ್ದ ವ್ಯಕ್ತಿಯೇ ಇರುವುದರ ಬಗ್ಗೆ ಎಸಿಬಿ ಅನುಮಾನ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ