ನವದೆಹಲಿ: ರಾಜ್ಯದಲ್ಲಿ ಕೋರೋನಾ ರೋಗಕ್ಕೆ ಹೆದರಿ ಕಂಗಾಲಿಗರುವ ಜನತೆಗೆ ಮತ್ತೊಂದು ಶಾಕ್ ಜನತೆಗೆ ದೊರೆತಿದೆ.
ಹೆಲಿಕಾಫ್ಟರ್ ಮನಿ ಎಂಬ ಹೆಡ್‌ಲೈನ್‌ನೊಂದಿಗೆ ಚಾನೆಲ್ಲೊಂದು ಸುದ್ದಿಯನ್ನು ಪ್ರಸಾರಗೊಳಿಸಿತ್ತು. ಇದರಲ್ಲಿ ಸರ್ಕಾರ ಹೆಲಿಕಾಫ್ಟರ್ ಮೂಲಕ ಹಣವನ್ನು ಸುರಿಸಲಿದೆ ಎನ್ನುವ ವರದಿ ಬಿತ್ತರಿಸಿತ್ತು.
ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿವಾಹಿನಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಾರ್ತಾ ಸಚಿವರಿಗೆ ದೂರು ನೀಡಲಾಗಿತ್ತು. ದೂರಿನ ಅನ್ವಯ ಕೇಂದ್ರ ಸರಕಾರ ನೋಟಿಸ್ ಜಾರಿ ಮಾಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಬಡವರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಲು ಪ್ರಧಾನಮಂತ್ರಿ ಮೋದಿ ಸರ್ಕಾರ ಹೆಲಿಕಾಪ್ಟರ್‌ನಿಂದ ಹಣದ ಮಳೆ ಹರಿಸಬಹುದು ಎನ್ನುವ ಸುಳ್ಳು ವರದಿ ಪ್ರಸಾರ ಮಾಡಿತ್ತು. ಇದರಿಂದ ಜನತೆಯಲ್ಲಿ ಆತಂಕ ಉಂಟು ಮಾಡಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.