ಏಕವಚನದಲ್ಲಿ ಶಾಸಕರನ್ನು ನಿಂದಿಸಿದ್ದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯನವರು ಶಾಸಕ ಎಂ.ಪಿ.ನರೇಂದ್ರ ಅವರನ್ನು ಕ್ಷಮೆಯಾಚಿಸಿದ್ದಾರೆ. ಅಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರೇ ಸಚಿವ ಅಂಜನೇಯ್‌ರನ್ನು ತರಾಟೆಗೆ ತೆಗೆದುಕೊಂಡ ಘಟನೆ ವರದಿಯಾಗಿದೆ.
ಸಚಿವ ಎಚ್. ಆಂಜನೇಯ ನೇತೃತ್ವದಲ್ಲಿ ಎಸ್‌ಸಿ ಎಸ್‌ಟಿ ಸಮುದಾಯದ ಅನುದಾನ ಬಳಕೆಯ ಕುರಿತು ವಿಧಾನಸಭೆಯಲ್ಲಿ ಸಭೆ ನಡೆದಿತ್ತು. ಈ ವೇಳೆ, ಸಚಿವ ಆಂಜನೇಯ ಮತ್ತು ಶಾಸಕ ಎಂ.ಪಿ.ನರೇಂದ್ರ ಅವರ ಮಧ್ಯ ಮಾತಿನ ಚಕಮಕಿ ನಡೆದಿದೆ. ಸಚಿವರು ಉಡಾಫೆಯಂತೆ ವರ್ತಿಸಿ, ಗೊತ್ತು ಗುರಿ ಇಲ್ಲದೆ ಸುಮ್ಮನೆ ಆರೋಪ ಮಾಡುತ್ತಿಯಾ ಎಂದು ಶಾಸಕ ಎಂ.ಪಿ.ನರೇಂದ್ರ ಅವರನ್ನು ಏಕವಚನದಲ್ಲಿ ನಿಂದನೆ ಮಾಡಿದ್ದಾರೆ.
ಸಚಿವರ ಉಡಾಫೆ ವರ್ತನೆಯಿಂದ ಬೇಸತ್ತ ಶಾಸಕ ಎಂ.ಪಿ.ನರೇಂದ್ರ, ಸಚಿವರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಶಾಸಕರ ಒತ್ತಡಕ್ಕೆ ಮಣಿದು ತಮ್ಮ ಉಡಾಫೆ ವರ್ತನೆ ಕುರಿತು ಸಚಿವ ಎಚ್.ಆಂಜನೇಯ ಕ್ಷಮೆಯಾಚಿಸಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.