Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

20 ಸಾವಿರ ಕೋಟಿ ಲೂಟಿ: ದೇವೇಗೌಡ ಕುಟುಂಬದ ವಿರುದ್ಧ ಐಟಿ ಇಲಾಖೆಗೆ ದೂರು

20 ಸಾವಿರ ಕೋಟಿ ಲೂಟಿ: ದೇವೇಗೌಡ ಕುಟುಂಬದ ವಿರುದ್ಧ ಐಟಿ ಇಲಾಖೆಗೆ ದೂರು
ಬೆಂಗಳೂರು , ಬುಧವಾರ, 24 ಮೇ 2017 (13:35 IST)
ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಕುಟುಂಬದ ವಿರುದ್ಧ ಐಟಿ ಇಲಾಖೆಗೆ ದೂರು ನೀಡಲಾಗಿದೆ.
 
20 ಸಾವಿರ ಕೋಟಿಗೂ ಹೆಚ್ಚು ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ವೆಂಕಟೇಶ್ ಗೌಡ್ ಎನ್ನುವವರು ದೂರು ನೀಡಿದ್ದಾರೆ.
 
ಲೂಟಿ ಹೊಡೆದ ಹಣವನ್ನು ದೆಹಲಿ ಮತ್ತು ಅಮೆರಿಕದಲ್ಲಿ ಹಣವಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಹಾಸನದಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವವರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ. ದೇವೇಗೌಡರ ಹಿರಿಯ ಸೊಸೆ ಕವಿತಾ, ಬಾಲಕೃಷ್ಣ ಹೆಸರಲ್ಲಿ ಹೆಚ್ಚಿನ ಹಣ ಹೋಗಿದೆ ಎಂದು ಆರೋಪಿಸಿದ್ದಾರೆ.
 
ಜಂತಕಲ್ ಮೈನಿಂಗ್‌ನಲ್ಲೂ ಕುಮಾರಸ್ವಾಮಿ ಪಾತ್ರವಿದೆ ಎಂದು ದೂರುದಾರ ವೆಂಕಟೇಶ್‌ಗೌಡ್ ಆದಾಯ ತೆರಿಗೆ ಇಲಾಖೆಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಗರಣಗಳನ್ನು ಬಯಲು ಮಾಡುವುದೇ ನಮ್ಮ ಕೆಲಸ: ಯಡಿಯೂರಪ್ಪ