Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಿಕ್ಷಕರ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರು

ಶಿಕ್ಷಕರ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಮಂಜೂರು
ಕಲಬುರಗಿ , ಗುರುವಾರ, 6 ಸೆಪ್ಟಂಬರ್ 2018 (15:14 IST)
ಹೈದ್ರಾಬಾದ ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಶಿಕ್ಷಕರ ಭವನಕ್ಕಾಗಿ ಈಗಾಗಲೆ ಸರ್ಕಾರ ತಲಾ 1 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಕಲಬುರಗಿ ನಗರದಲ್ಲಿ ಶಿಕ್ಷಕರ ಭವನಕ್ಕಾಗಿ ಜಿಲ್ಲಾಧಿಕಾರಿಗಳು ಸಿ.ಎ. ನಿವೇಶನ ಒದಗಿಸಿದಲ್ಲಿ ಭವ್ಯವಾದ ಶಿಕ್ಷಕರ ಭವನ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ತಿನ ಶಾಸಕ ಶರಣಪ್ಪ ಮಟ್ಟೂರ ಹೇಳಿದರು.

ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾದ 2018-19ನೇ ಸಾಲಿನ  ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಪ್ರಸ್ತುತ ಶಿಕ್ಷಕರ ಭವನಕ್ಕೆ ನಗರದ ಎಸ್.ಟಿ.ಬಿ.ಟಿ. ಪ್ರದೇಶದಲ್ಲಿ ನೀಡಲಾಗಿರುವ ನಿವೇಶನ ತುಂಬಾ ಚಿಕ್ಕದಾಗಿದ್ದು, ಶಿಕ್ಷಕರ ಭವನಕ್ಕೆ ಸೂಕ್ತ ಸ್ಥಳವಾಗಿಲ್ಲ. ಹೀಗಾಗಿ ಇದರ ಬದಲಾಗಿ ನಗರದಲ್ಲಿ ಒಂದು ಎಕರೆಯ ಸಿ.ಎ.ನಿವೇಶನ ನೀಡಿದಲ್ಲಿ ಶಿಕ್ಷಕರ ಭವನ ನಿರ್ಮಿಸಲಾಗುವುದು. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಂತೆ ಕಾರ್ಯಕ್ರಮಗಳು, ತರಬೇತಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಪಠ್ಯ ಶಿಕ್ಷಣ ಹೊರತುಪಡಿಸಿ ಪಠ್ಯೇತರ 27 ಕಾರ್ಯಕ್ರಮಗಳ ಅನುಷ್ಠಾನವನ್ನು ಶಿಕ್ಷಕರ ಹೆಗಲಿಗೆ ವಹಿಸಿದ್ದು, ಸಹಕವಾಗಿಯೆ ಶಿಕ್ಷಕರ ಮೇಲೆ ಕಾರ್ಯದೊತ್ತಡ ಹೆಚ್ಚಾಗಿದೆ. ಇದೂ ಸಹ ಫಲಿತಾಂಶ ಕುಂಠಿತಗೊಳ್ಳಲು ಒಂದು ಕಾರಣವಾಗಿದ್ದು, ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಿ ನೌಕರರಿಗೆ ಏಳನೇ ವೇತನ ಜಾರಿಗೊಂಡರು ಸಹ ತಾಂತ್ರಿಕ ಸಮಸ್ಯೆಯಿಂದ ಸಕಾಲದಲ್ಲಿ ವೇತನ ಪಾವತಿಯಾಗದೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿಗಳಿಗೆ ಶಿಕ್ಷಕರು ಅಲೆದಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ