ಬೆಂಗಳೂರು : ರೌಡಿಶೀಟರ್ ಸ್ಲಂ ಭರತ್ ನ ಎನಕೌಂಟರ್ ಮಾಡಿದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಆತನ ಸಹಚರರು ಸ್ಕೇಚ್ ಹಾಕಿದ್ದಾರೆ ಎಂಬ ಸ್ಪೋಟಕ ವಿಚಾರ ತಿಳಿದುಬಂದಿದೆ.
ರೌಡಿಶೀಟರ್ ಸ್ಲಂ ಭರತ್ ನ ಎನಕೌಂಟರ್ ಆದ ಬಳಿಕ ಆತನ ಸಹಚರರನ್ನು ಬಂಧಿಸಿದ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಅವರ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ 12 ಸಹಚರರನ್ನು ಬಂಧಿಸಿದ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಇನ್ನುಳಿದ ಸಹಚರರ ಬಂಧನಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.