ಬೆಂಗಳೂರು : ರಾಜ್ಯದ ಉನ್ನತ ಮಹಿಳಾ ಅಧಿಕಾರಿಗಳ ಕಚ್ಚಾಟ ಇದೀಗ ಕೋರ್ಟ್ ವರೆಗೆ ತಲುಪಿದೆ. ಐಪಿಎಸ್ ಅಧಿಕಾರಿ ಡಿ ರೂಪಾ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ರೋಹಿಣಿ ಮಾಧ್ಯಮಗಳು ಹಾಗೂ ರೂಪಾ ವಿರುದ್ಧ ನಿರ್ಬಂಧಕಾಜ್ಞೆ ಅರ್ಜಿ ಸಲ್ಲಿಸಿದ್ದಾರೆ. ರೂಪಾ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಿಎಸ್ಗೆ ದೂರು ನೀಡಿದರೂ ಚೌಕಟ್ಟು ಮೀರಿ ಮಾತನಾಡುತ್ತಿದ್ದಾರೆ.
ಹೀಗಾಗಿ ಅವರು ತಮ್ಮ ವಿರುದ್ಧ ಮಾತನಾಡದಂತೆ ನಿರ್ಬಂಧ ಹೇರಬೇಕು ಎಂದು ರೋಹಿಣಿ ವಾದ ಮಂಡಿಸಿದ್ದಾರೆ.
ಈಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳಕ್ಕೆ ಸರ್ಕಾರ ಅಂತ್ಯ ಹಾಡಿದೆ. ರೋಹಿಣಿ ಸಿಂಧೂರಿ, ರೂಪಾ, ಹಾಗೂ ರೂಪಾ ಪತಿ ಮುನೀಷ್ ಮೌದ್ಗಿಲ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.