ಕೆಂಪೇಗೌಡ ಆಟದ ಮೈದಾನ ಉಳಿಸಲು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿಗಳು ಪ್ರತಿಭಟನೆಗೆ ನಡೆಸಿದ್ದಾರೆ.ಆಟದ ಮೈದಾನದಲ್ಲಿ ಶಾಲೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದಾರೆ.
ಕರ್ನಾಟಕ ಸರ್ಕಾರ ಆಟದ ಮೈದಾನದಲ್ಲಿ ಶಾಲೆಯನ್ನು ನಿರ್ಮಿಸಲು ಮುಂದಾಗಿದೆ.1.6 ಎಕರೆ ವಿಸ್ತೀರ್ಣದ ಕೆಂಪೇಗೌಡ ಮೈದಾನ ಸರ್ವೆ ಸಂಖ್ಯೆ 223 ಮತ್ತು 224, ಹಲಗೆವಡೇರಹಳ್ಳಿ, ಕೆಂಗೇರಿ ಹೋಬಳಿ, ಬೆಂಗಳೂರು ದಕ್ಷಿಣ, ಎಲ್ಲಾ ವಯಸ್ಸಿನ ಜನರಿಗೆ ಕ್ರೀಡಾ ಚಟುವಟಿಕೆಗಳಿಗೆ ಲಭ್ಯವಿರುವ ಏಕೈಕ ಸ್ಥಳವಾಗಿದೆ.155 ಎಕರೆ ವಿಸ್ತೀರ್ಣದ ವಸತಿ ಬಡಾವಣೆಯಲ್ಲಿ ಲಭ್ಯವಿರುವ ಯಾವುದೇ ನಾಗರಿಕ ಸೌಲಭ್ಯಗಳ ಖಾಲಿ ಜಾಗದಲ್ಲಿ ಶಾಲೆ ನಿರ್ಮಿಸಲು ನಿವಾಸಿಗಳು ಸರ್ಕಾರಕ್ಕೆ ಮನವಿ ಮಾಡಿದ್ದು,ಕೆಂಪೇಗೌಡ ಆಟದ ಮೈದಾನವನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 2006 ರಲ್ಲಿ ಉದ್ಘಾಟಿಸಿದ್ರು.ಈಗ ಶಾಲೆ ನಿರ್ಮಾಣ ಮಾಡಿದ್ರೆ ಯುವಕರು ತಮ್ಮ ಕ್ರೀಡಾ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಸ್ಥಳಾವಕಾಶದಿಂದ ವಂಚಿತರಾಗುತ್ತಾರೆ ಎಂದು ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ.