ಸರಕಾರಿ ಜಾಗ, ಉದ್ಯಾನವನ ಹೀಗೆ ಎಲ್ಲಿ ಬೇಕಂದರಲ್ಲಿ ಚರ್ಚಗಳು...ದೇವಸ್ಥಾನಗಳು... ತಲೆ ಎತ್ತುವಂತಿಲ್ಲ. ಈಗಾಗಲೇ ಸುಪ್ರಿಂಕೋರ್ಟ ಸ್ಪಷ್ಟ ಆದೇಶ ನೀಡಿದ್ದು, ಇಂಥ ಸ್ಥಳಗಳಲ್ಲಿ ಶೃದ್ಧಾ ಭಕ್ತಿಯ ಕೇಂದ್ರ ಸ್ಥಾಪಿಸುವಂತಿಲ್ಲ ಎಂದು ಆದೇಶವನ್ನು ನೀಡಿದೆ. ಆದ್ರೇ ಇದೆಲ್ಲವನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಾಣವಾಗುತ್ತಿದೆ.
ಪೋಲೀಸ್ ಇಲಾಖೆ ಕಾರವಾರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ ಜಾಗದಲ್ಲಿ ಚರ್ಚನ್ನು ನಿರ್ಮಿಸುತ್ತಿದೆ. ಈ ಹಿಂದೆ ಕೆಲ ಕ್ರಿಶ್ಚಿಯನ್ ಧರ್ಮಿಯರು ಪೊಲೀಸ್ ಹೆಡ್ ಕ್ವಾರ್ಟರ್ ನಲ್ಲಿ ಒಂದು ಕೋಣೆಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾ ಬಂದಿದ್ದರು. ಇಷ್ಟಕ್ಕೂ ಇದು ಕೇವಲ ಪ್ರಾರ್ಥನೆ ಸಲ್ಲಿಸಲು ಮಾತ್ರ ಮಾನವೀಯ ದೃಷ್ಠಿಯಿಂದ ಪೊಲೀಸ್ ವರಿಷ್ಠಾಧಿಕಾರಿಗಳಿದ್ದವರು ಅವಕಾಶ ನೀಡಿದ್ದರು.
ಇದೀಗ ಈ ಹಿಂದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದ ಕಟ್ಟಡ ಅತ್ಯಂತ ಹಳೆಯಾದ ಹಿನ್ನಲೆಯಲ್ಲಿ ತೆರವುಗೊಳಿಸಲು ಮುಂದಾಗಿದೆ. ಇದೀಗ ಇದನ್ನೆ ನೆಪ ಮಾಡಿ ಚರ್ಚ ಕಟ್ಟಲು ಪೊಲೀಸ್ ವರಿಷ್ಠಾಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ ಎನ್ನುವ ವಿಷಯ ಬಹಿರಂಗಗೊಂಡಿದೆ. ಚರ್ಚ ಕಟ್ಟಡವನ್ನು ಮಾರುತಿ ಮಂದಿರದ ಪಕ್ಕದಲ್ಲೇ ನಿರ್ಮಿಸಲಾಗುತ್ತಿದೆ. ಮುಂದೆ ಇದು ಕೋಮು ಸೌಹಾರ್ಧತೆಗೆ ಧಕ್ಕೆ ಆಗುವ ಲಕ್ಷಣ ಕಾಣುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.