ಅಂಗನವಾಡಿ ಆರಂಭಕ್ಕೆ ಈಗಾಗಲ್ಲೇ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಗೊಂಡಿದೆ. ರಾಜ್ಯದಲ್ಲಿ ನವೆಂಬರ್ 8ರಿಂದ ಅಂಗನವಾಡಿ ಆರಂಭವಾಗಲಿದ್ದು,ಅಂಗನವಾಡಿ ಕಾರ್ಯಕರ್ತೆ ಹಾಗೂ ಸಾಹಯಕರು ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು.ಅಂಗನವಾಡಿ ಆರಂಭವಾಗುವ ಮುಂಚಿತವಾಗಿಅಂಗನವಾಡಿ ಕೇಂದ್ರವನ್ನ ಸ್ವಚ್ಛಗೊಳಿಸಬೇಕು.ರಾಸಾಯನಿಕ ದ್ರಾವಣ ಸಿಂಪಡಿಸಿ ಅಂಗನಡವಾಡಿ ಕೇಂದ್ರ ಸಿದ್ಧಪಡಿಸಬೇಕು.ಅಷ್ಟೇ ಅಲ್ಲದೆ ಅಂಗನವಾಡಿ ಆರಂಭದ ಮೊದಲು ಸ್ಥಳೀಯ ಗ್ರಾಮ ಪಂಚಾಯಿತಿ ಗಮನಕ್ಕೆ ತರಬೇಕು.ಅಂಗನವಾಡಿಗೆ ಮಕ್ಕಳು ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು.ಅಂಗನವಾಡಿ ಫಲಾನುಭವಿ ಪೋಷಕರಿಗೂ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯಗೊಳಿಸಿದ್ದು, ಕೊವಿಡ್ ಪಾಸಿಟಿವಿಟಿ ದರ 2% ಕ್ಕಿಂತ ಕಡಿಮೆ ಇರೊ ಜಿಲ್ಲೆಗಳಲ್ಲಿ ಮಾತ್ರ ಅಂಗನವಾಡಿ ಆರಂಭವಾಗಲಿದೆ.ಮೊದಲ ಹಂತದಲ್ಲಿ ಅಂಗನವಾಡಿಗಳನ್ನ 10 -12 ಗಂಟೆವರೆಗೆ ಮಾತ್ರ ಆರಂಭ ಮಾಡಲಾಗ್ತದೆ.ಆದ್ರೆ ಕೊವಿಡ್ ಲಕ್ಷಣ ಇರೊ ಮಕ್ಕಳಿಗೆ ಅಂಗನವಾಡಿಗೆ ಪ್ರವೇಶ ಇಲ್ಲ.