ಗಣೇಶನನ್ನು ತೋರಿಸುವ ನೆಪದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾರುಖ್ ಖತೀಬ್, ವಿನಾಯಕ ಜಾಧವ ಹಾಗೂ ರಜತ್ ಜಾಧವ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ವಿನಾಯಕ ಜಧವ ಎನ್ನುವ ಕಾಮುಕ ತನಗೆ ಪರಿಚಯವಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಗಣಪತಿ ತೋರಿಸುವುದಾಗಿ ಕರೆದೊಯ್ದಿದ್ದನಂತೆ. ಈತನ ಸ್ನೇಹಿತ ರಜತ್ ಕಾರಿನಲ್ಲಿ ರಾತ್ರಿ 10.30ರವರೆಗೂ ನಗರದಲ್ಲಿರುವ ಗಣಪತಿ ಮೂರ್ತಿಗಳನ್ನು ತೋರಿಸಿದ್ದರು. ನಂತರ ಸಮೋಸದಲ್ಲಿ ಮತ್ತು ಬರುವ ಮಾತ್ರೆ ಹಾಕಿ ಇಬ್ಬರು ಬಾಲಕಿಯರ ಪ್ರಜ್ಞೆ ತಪ್ಪಿಸಿ, ಶಾರುಖ್ ಖತೀಬ್ ಎನ್ನುವವನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ