ಪಾಕಿಸ್ತಾನದ ಕರಾಚಿಯ ಗುಲ್ಶನ್-ಎ-ಹದೀದ್‌ನಲ್ಲಿರುವ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲಿಂಗ್ ಆರೋಪದ ಮೇಲೆ ಬಂಧಿಸಲಾಗಿದೆ. 45ಕ್ಕೂ ಹೆಚ್ಚು ಮಹಿಳೆಯರು ಪ್ರಿನ್ಸಿಪಾಲ್ ಇರ್ಫಾನ್ ಗಫೂರ್ ಮೆಮನ್‌ನಿಂದ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ ಎಂದು ಪಾಕಿಸ್ತಾನ ಮೂಲದ ವಾಹಿನಿಯೊಂದು ವರದಿ ಮಾಡಿದೆ.ಇನ್ನು, ಆಘಾತಕಾರಿ ವಿಚಾರ ಏನೆಂದರೆ, ಪೊಲೀಸರು ಇರ್ಫಾನ್ ಫೋನ್‌ನಿಂದ ಸುಮಾರು 25 ವಿಡಿಯೋ ತುಣುಕುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಗಾಗಿ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಡಿಜಿಟಲ್ ವಿಡಿಯೋ ರೆಕಾರ್ಡರ್ ಮತ್ತು ಮೆಮನ್ ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೆಮನ್ ಮತ್ತು ಮಹಿಳಾ ಶಿಕ್ಷಕಿಯೊಬ್ಬರ ವಿಡಿಯೋ ವೈರಲ್ ಆದ ನಂತರ ಹಗರಣ ಬೆಳಕಿಗೆ ಬಂದಿದ್ದು,ಶೀಘ್ರದಲ್ಲೇ, ಪ್ರಾಂಶುಪಾಲರ ಕಚೇರಿಗೆ ಬೀಗ ಹಾಕಿ ಅವರನ್ನು 7 ದಿನಗಳ ರಿಮ್ಯಾಂಡ್‌ಗೆ ಕಳುಹಿಸಲಾಗಿದೆ ಅಂತಾ ಮೂಲಗಳಿಂದು ತಿಳಿದು ಬಂದಿದೆ.