ಅತ್ಯಾಚಾರ ಆರೋಪಿಯೊಬ್ಬ ಕೋರ್ಟ್`ನ 4ನೇ ಮಹಡಿಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ ಘಟನೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಡೆದಿದೆ. ಈ ಸಂದರ್ಭ ಆರೋಪಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಫೆಬ್ರವರಿ 9ರಂದು `ಬಾಗಲಕುಂಟೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪದಡಿ ವಿಕ್ಕಿ ಅಲಿಯಾಸ್ ನರಸಿಂಹಮೂರ್ತಿಯನ್ನ ಬಂಧಿಸಿ ಇವತ್ತು ಕೋರ್ಟ್`ಗೆ ಕರೆತರಲಾಗಿತ್ತು. ಈ ಸಂದರ್ಭ ಪರಾರಿಯಾಗುವ ಯತ್ನದಲ್ಲಿ ಆರೋಪಿ 4ನೇ ಮಹಡಿಯಿಂದ ಜಿಗಿದಿದ್ದಾನೆ.