ಬೆಳಗಾವಿ: ತೋಳ ಬಂತು ತೋಳ ಅಲ್ಲ ಈಗ ಹುಲಿ ಬಂತು ಹುಲಿ ಎಂದು ಹೇಳುವುದರ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಗೆ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ತಮ್ಮ ಬಗ್ಗೆ ವ್ಯಂಗ್ಯ ಮಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ವಾಗ್ದಾಳಿ ನಡೆಸಿದ ರಮೇಶ್ ಜಾರಕಿಹೊಳಿ, ಹೆಬ್ಬಾಳ್ಕರ್ ಸೀನಿಯರ್ ಆದ ಮೇಲೆ ಸಿಎಂ ಮಾಡಲಿ. ಆದ್ರೆ ನನ್ನ ತಲೆ ಮೇಲೆ ಆಕೆಯನ್ನು ಕೂರಿಸಿದ್ರೆ ಒಪ್ಪಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಲಕ್ಷ್ಮೀಗೆ ಸ್ಥಾನಮಾನ ಕೊಡಬಾರದೆಂದು ಪಕ್ಷದಲ್ಲಿ ಸಿದ್ದರಾಮಯ್ಯ, ಡಿಕೆಶಿ, ದಿನೇಶ್ ಸಮ್ಮುಖದಲ್ಲಿ ನಾನೇ ಷರತ್ತು ವಿಧಿಸಿದ್ದೆ. ಆದರೂ ಹೆಬ್ಬಾಳ್ಕರ್ ಗೆ ನಿಗಮ ಮಂಡಳಿಯನ್ನು ನೀಡಿದ್ರು. ನಾನು ಸುಮ್ಮನಿದಿದ್ದರೆ ಸಚಿವೆ ಸ್ಥಾನ ಕೊಡ್ತಿದ್ದರು. ಆಕೆಯ ಹಣೆಬರಹದಲ್ಲಿ ಇದ್ರೆ ಸಚಿವೆಯಾಗಲಿ, ಆದರೆ ಆಕೆಗಾಗಿ ದುಡಿದವರ ಬಗ್ಗೆ ಸ್ವಲ್ಪ ಚಿಂತೆ ಮಾಡಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೇ ತಮ್ಮ ಸಹೋದರ ಸತೀಶ್ ಜಾರಕಿಹೊಳಿ ಬಗ್ಗೆ ಕಿಡಿಕಾರಿದ ಅವರು, ಸತೀಶ್ ಜಾರಕಿಹೊಳಿ ಹೋರಾಟಗಾರ ಅಲ್ಲ. ಹೆಬ್ಬಾಳ್ಕರ್ ಮನೆಗೆ ಸತೀಶ್ ಚಹಾ ಕುಡಿಯೋಕೆ ಹೋಗ್ತಿದ್ದರು ಎಂದಿದ್ದಾರೆ. ಅಲ್ಲದೇ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಕೆಶಿ ಜತೆಗೆ ಜಗಳಕ್ಕೆ ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದೆ ಕಾರಣ ಎಂದು ತಿಳಿಸಿದ್ದಾರೆ.