ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿರುವ ಯುವತಿ ಮನೆಯಲ್ಲಿ ಲಕ್ಷಗಟ್ಟಲೆ ಹಣವನ್ನು ಎಸ್ ಐಟಿ ತಂಡ ವಶಪಡಿಸಿಕೊಂಡಿದೆ ಎನ್ನಲಾಗಿದೆ.
ಯುವತಿ ವಾಸಿಸುತ್ತಿದ್ದ ಗಂಗಾನಗರದ ಬಾಡಿಗೆ ಮನೆಯಲ್ಲಿ 9 ಲಕ್ಷ ರೂ.ಗೂ ಅಧಿಕ ಹಣ, ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಸಿಡಿ ರಿಲೀಸ್ ಗೂ ಕಿಂಗ್ ಪಿನ್ ಗಳು ಆರ್ ಟಿ ನಗರದಲ್ಲಿ ಸಭೆ ನಡೆಸಿದ್ದರು ಎನ್ನಲಾಗಿದೆ.
ಈಗ ಕಿಂಗ್ ಪಿನ್ ಸಂಪರ್ಕಿತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಸಿಡಿ ತಯಾರಿಸಲು ಭಾಗಿಯಾಗಿದ್ದವರಿಗಾಗಿ ಎಸ್ ಐಟಿ ತಂಡ ಹುಡುಕಾಟ ನಡೆಸಿದೆ.