ರಮೇಶ್ ಜಾರಕಿಹೋಳಿ ರಾಜೀನಾಮೆ ವಿಚಾರ ಕೇವಲ ಡೆಡ್ ಲೈನ್ ಅಷ್ಟೇ. ಹಿಂದೆ ಕೊಟ್ಟಂತೆ ಈಗಲೂ ಇನ್ನೊಂದು ಡೆಡ್ ಲೈನ್ ಕೊಡ್ಟಿದ್ದಾರೆ ಅಷ್ಟೇ. ಹೀಗಂತ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಜಾರಕಿಹೊಳಿ ನಡೆ ಪರಿಣಾಮ ನಮ್ಮ ಉಪ ಚುನಾವಣೆ ಮೇಲೆನೂ ಆಗೋದಿಲ್ಲ. ಚಿಂಚೋಳಿ ಉಪಚುನಾವಣೆಯಲ್ಲಿ ಗೆಲುವು ನಮ್ಮದೇ. ಉಮೇಶ್ ಜಾಧವ್ ಹೇಗೆ ಪಕ್ಷ ಬಿಟ್ಟು ಹೋಗಿದಾರೆ ಅಂತಾ ಎಲ್ರಿಗೂ ಗೊತ್ತು. ಪ್ರಾಮಾಣಿಕ ಆಡಳಿತ ಕೊಡ್ತೀವಿ ಅನ್ನೋ ಮೋದಿ ಇದರ ಬಗ್ಗೆ ಏನಂತಾರೆ..? ಎಂದರು.
ಬಜೆಟ್ ಅಧಿವೇಶನ ನಡೆಯುವ ವೇಳೆ ಆಪರೇಷನ್ ಕಮಲದ ಬಗ್ಗೆಯೇ ಚರ್ಚೆ ಆಗಿದೆ. ಉಪ ಚುನಾವಣೆ ಯಲ್ಲಿ ಜನ ಖಂಡಿತಾ ನಮಗೆ ಬೆಂಬಲ ಕೊಡ್ತಾರೆ ಎಂದರು.
ರಮೇಶ್ ಜಾರಕಿಹೊಳಿಗೆ ಈಗಲೂ ಮಾತುಕತೆ ನಡೆಸಲು ಅವಕಾಶಗಳಿವೆ. ಅವರು ಈಗಲೂ ನಮ್ಮ ಪಕ್ಷದ ಮುಖಂಡರ ಜೊತೆ ಕುಳಿತು ಮಾತಾಡಲಿ. ಉಪಚುನಾವಣೆ ಮೇಲೆ ಇವೆಲ್ಲಾ ಪರಿಣಾಮ ಬೀರಲ್ಲ. ಬಿಜೆಪಿ ಯವರು ಮತ್ತೆ ಇನ್ನೊಂದು ಡೆಡ್ ಲೈನ್ ಕೊಟ್ಟಿದಾರೆ ಅಷ್ಟೇ. ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಹೀಗಂತ ಬೆಂಗಳೂರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.