Webdunia - Bharat's app for daily news and videos

Install App

ಡಿ.ಕೆ. ಶಿವಕುಮಾರ್ ಮನೆ ಮೇಲಿನ ದಾಳಿ ರಾಜಕೀಯಪ್ರೇರಿತ: ಸಿಎಂ ಸಿದ್ದರಾಮಯ್ಯ

Webdunia
ಶುಕ್ರವಾರ, 4 ಆಗಸ್ಟ್ 2017 (15:14 IST)
ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ರಾಜಕೀಯಪ್ರೇರಿತ. ದಾಳಿಯ ಸಮಯವೂ ಸಹ ಇದೊಂದು ರಾಜಕೀಯಪ್ರೇರಿತ ದಾಳಿ ಎಂಬುದನ್ನ ತೋರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದೇ ಮನೆ ಮೇಲೆ ಐಟಿ ದಾಳಿ ಬಗ್ಗೆ ನನ್ನ ವಿರೋಧವಿಲ್ಲ. ಆದರೆ, ದಾಳಿ ಮಾಡಿದ ಸಮಯ ಮತ್ತು ಉದ್ದೇಶ ಸರಿಯಾದುದಲ್ಲ.  ಗುಜರಾತ್ ಶಾಸಕರು ಇಲ್ಲಿಗೆ ಬಂದಿರುವ ಸಂದರ್ಭದಲ್ಲೇ ದಾಳಿ ನಡೆದಿದೆ.

ಐಟಿ ದಾಳಿ ವೇಳೆ ಸ್ತಳೀಯ ಪೊಲೀಸರ ನೆರವು ಪಡೆಯುತ್ತರೆ. ಈ ಬಾರಿ ಐಟಿ ಅಧಿಕಾರಿಗಳು ಸಿಆರ್`ಪಿಎಫ್ ಕರೆತಂದಿದ್ದಾರೆ. ಇದು ಅವರ ಉದ್ದೇಶ ತೋರಿಸುತ್ತದೆ ಎಂದಿದ್ದಾರೆ. ದಾಳಿಯಲ್ಲಿ ಏನು ಸಿಕ್ಕಿದೆ, ಏನು ಸಿಕ್ಕಿಲ್ಲ ಎಂಬುದು ನಮ್ಮ ಯಾರಿಗೂ ಗೊತ್ತಿಲ್ಲ. ದಾಳಿಗೆ ಸಿಆರ್`ಪಿಎಫ್ ಬಳಸಿದ್ದೇಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಇದೇವೇಳೆ, ಡಿ.ಕೆ. ಶಿವಕುಮಾರ್ ರಾಜೀನಾಮೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಒತ್ತಾಯಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಅನಂತ್ ಕುಮಾರ್ ಮೇಲೂ ಭ್ರಷ್ಟಾಚಾರ ಆರೋಪವಿದೆ. ತನಿಖೆ ಈಗಲೂ ನಡೆಯುತ್ತಿದೆ. ಕರ್ನಾಟಕದ ಹಲವು ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಯಡಿಯೂರಪ್ಪನ ವಿರುದ್ಧ ಭ್ರಷ್ಟಾಚಾರ ಆರೋಪವಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments